ಹಾಸನ, (ಜುಲೈ 20): ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಮಣ್ಣಲ್ಲಿ ಮಣ್ಣಾಗಿದ್ದಾರೆ. ಗೌಡರ ಹುಟ್ಟೂರು ಹರದನಹಳ್ಳಿ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇಂದು (ಜುಲೈ 20) ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಹಿರಿಯ ಪುತ್ರ ಹೆಚ್ಡಿ ರಮೇಶ್ ಅವರು ಅಂತಿಮ ವಿಧಿವಿಧಾನ ಪೂರೈಸಿದ್ದು, ಇನ್ನು ದೇವೇಗೌಡ್ರು ಪತ್ನಿಯ ಕೊನೆ ಮುಖ ನೋಡಿ ಮಣ್ಣು ಹಾಕಿ ವಿದಾಯ ಹೇಳಿದರು.
