ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು? – Kannada News | Central Govt employees, 7th pay commission DA and DR likely to rise by 2pc in 2026 January June period

ನವದೆಹಲಿ, ಮಾರ್ಚ್ 5: ಜನವರಿಯಿಂದ ಬರಬೇಕಿರುವ ತುಟ್ಟಿಭತ್ಯೆ (DA- Dearness Allowance) ಹೆಚ್ಚಳದ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಇದ್ದಾರೆ. ಜನವರಿಯಿಂದ ಜಾರಿಗೆ ಬರುವ ತುಟ್ಟಿಭತ್ಯೆ ಹೆಚ್ಚಳವನ್ನು ಮಾರ್ಚ್​ನಲ್ಲಿ ಪ್ರಕಟಿಸಲಾಗುತ್ತದೆ. ಅಂದರೆ ಈ ತಿಂಗಳು ಡಿಎ ಮತ್ತು ಡಿಆರ್ ಅನ್ನು ಘೋಷಿಸಲಾಗುತ್ತದೆ. ವರದಿಗಳ ಪ್ರಕಾರ ಈ ಬಾರಿ ತುಟ್ಟಿಭತ್ಯೆಯನ್ನು ಶೇ. 2ರಷ್ಟು ಮಾತ್ರವೇ ಏರಿಕೆ ಮಾಡಬಹುದು.

ಶೇ. 2ರಷ್ಟು ಏರಿಕೆಯಾದರೆ ಏಳನೇ ವೇತನ ಆಯೋಗದಡಿಯಲ್ಲಿ ಸಿಗುವ ತುಟ್ಟಿಭತ್ಯೆ ಶೇ. 60 ದಾಟಿದಂತಾಗುತ್ತದೆ. ಎಂಟನೇ ವೇತನ ಆಯೋಗವು 2026ರ ಜನವರಿಯಿಂದಲೇ ಜಾರಿಗೆ ಬರುತ್ತದೆಯಾದರೂ, ಈ ಆಯೋಗ ಇನ್ನೂ ಕೂಡ ಯಾವುದೇ ಶಿಫಾರಸುಗಳ ವರದಿ ಕೊಟ್ಟಿಲ್ಲ. 2026ರ ನವೆಂಬರ್​ನಲ್ಲಿ ರಚನೆಯಾದ 8ನೇ ವೇತನ ಆಯೋಗ, 18 ತಿಂಗಳೊಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ನಿರ್ದೇಶನ ಹೊಂದಿದೆ.

ಅಂದರೆ, 2027ರಲ್ಲಿ ಇದರ ವರದಿ ಬರಬಹುದು. ಅಲ್ಲಿಯವರೆಗೆ 7ನೇ ವೇತನ ಆಯೋಗದ ಶಿಫಾರಸುಗಳೇ ಚಾಲನೆಯಲ್ಲಿರಬಹುದು. 8ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದಲ್ಲಿ, 2026ರ ಜನವರಿಯಿಂದ ಮತ್ತೊಮ್ಮೆ ಡಿಎ ಮತ್ತು ಸಂಬಳದ ರಚನೆಯನ್ನು ಪರಿಷ್ಕರಿಸಬಹುದು.

ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಡಿಎ ಏರಿಕೆಯ ಲೆಕ್ಕಾಚಾರ ಏನು?

ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಅನುಸೂಚಿ (ಎಐಸಿಪಿಐ ಐಡಬ್ಲ್ಯು) ಆಧಾರದ ಮೇಲೆ ಡಿಎ ಹೆಚ್ಚಳ ನಿರ್ಧರಿಸಲಾಗುತ್ತದೆ. ಈ ಬಾರಿಯ ಡಿಎ ಹೆಚ್ಚಳಕ್ಕೆ 2025ರ ಡಿಸೆಂಬರ್ ತಿಂಗಳ ಅನುಸೂಚಿಯ ದತ್ತಾಂಶವನ್ನು ಪರಿಗಣಿಸಲಾಗಿದೆ. 2025ರ ಜುಲೈ-ಡಿಸೆಂಬರ್ ಅವಧಿಯ ಸಿಪಿಐ-ಐಡಬ್ಲ್ಯು ಸರಾಸರಿ 419.17 ಅಂಕಗಳಿವೆ. 7ನೇ ವೇತನ ಆಯೋಗದ ಸೂತ್ರದ ಪ್ರಕಾರ ಡಿಎ ಶೇ. 60.34 ಆಗುತ್ತದೆ. ದಶಾಂಶವನ್ನು ನಿರ್ಲಕ್ಷಿಸಿದಾಗ ತುಟ್ಟಿಭತ್ಯೆ ಶೇ. 60ಕ್ಕೆ ನಿಲ್ಲುತ್ತದೆ.

2025ರ ಜುಲೈ ತಿಂಗಳ ತುಟ್ಟಿಭತ್ಯೆ ಶೇ. 58 ಇತ್ತು. ಈಗ ಶೇ. 2 ಮಾತ್ರವೇ ಹೆಚ್ಚಳ ಆಗುವುದು. ಕಳೆದ ಒಂದು ದಶಕದಲ್ಲಿ ಕೆಲವೇ ಬಾರಿ ಇಷ್ಟು ಕಡಿಮೆ ಡಿಎ ಹೆಚ್ಚಳ ಆಗಿರುವುದು.

ಡಿಎ ಮತ್ತು ಡಿಆರ್ ಹೆಚ್ಚಳ ಯಾಕೆ?

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್. ಡಿಆರ್ ಎಂದರೆ ಡಿಯರ್ನೆಸ್ ರಿಲೀಫ್. ಡಿಎ ಅನ್ನು ಹಾಲಿ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಸರ್ಕಾರಿ ನೌಕರಿಗಳಿಂದ ನಿವೃತ್ತರಾದ ಪಿಂಚಣಿದಾರರಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

ಹಣದುಬ್ಬರ ಏರಿಕೆಯಿಂದ ಸಂಬಳ ಮತ್ತು ಪಿಂಚಣಿಯ ಮೌಲ್ಯ ಕಡಿಮೆ ಆಗಬಾರದು ಎನ್ನುವ ಉದ್ದೇಶದಿಂದ ಇದನ್ನು ವರ್ಷಕ್ಕೆ ಎರಡು ಬಾರಿ ಏರಿಸಲಾಗುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ಇದನ್ನು ಲೆಕ್ಕಾಚಾರ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *