Headlines

ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ವಿಶೇಷ ನಮನ; ಬಯೋಗ್ರಫಿ ‘ಎಂಪ್ರೆಸ್’ ಮೊದಲ ಲುಕ್ ರಿಲೀಸ್ – Kannada News | Priyanka Chopra Remembers Sridevi On Birth Anniversary, Unveils Biography Empress First Look

ಭಾರತೀಯ ಚಿತ್ರರಂಗದ ದಿವಂಗತ ನಟಿ ಶ್ರೀದೇವಿ ಅವರ (Sridevi) ಜನ್ಮದಿನದಂದು ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ ವಿಶೇಷ ಗೌರವ ಸಲ್ಲಿಸಿದ್ದಾರೆ. ಶ್ರೀದೇವಿ ಅವರ ಜೀವನ ಆಧಾರಿತ ಮುಂಬರುವ ಬಯೋಪಿಕ್ ಪುಸ್ತಕದ ಮೊದಲ ಲುಕ್​ ಅನ್ನು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕಕ್ಕೆ ‘ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ’ ಎಂದು ಹೆಸರಿಡಲಾಗಿದೆ. ಪ್ರಿಯಾಂಕಾ ಅವರ ಈ ಭಾವಪೂರ್ಣ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ.

ಈ ಕೃತಿಯನ್ನು ಧೀರಜ್ ಯು ಕುಮಾರ್ ಬರೆದಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ ಸಂಸ್ಥೆಯು ಇದನ್ನು ಪ್ರಕಟಿಸುತ್ತಿದೆ. ಈ ಪುಸ್ತಕದಲ್ಲಿ ಶ್ರೀದೇವಿ ಅವರ ಬಾಲನಟಿಯ ದಿನಗಳಿಂದ ಹಿಡಿದು ಸೂಪರ್‌ಸ್ಟಾರ್ ಆಗಿ ಬೆಳೆದ ಸುಂದರ ಪಯಣವನ್ನು ವಿವರಿಸಲಾಗಿದೆ. ಅವರ ಸಿನಿಮಾ ಜೀವನದ ಸಾಧನೆಗಳು ಮತ್ತು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಪುಸ್ತಕದ ಮುಖಪುಟದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ವಿಶೇಷ ಸಾಲುಗಳಿವೆ. ಅವರು ಶ್ರೀದೇವಿ ಅವರನ್ನು ಸಾಟಿಯಿಲ್ಲದ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಎಕ್ಸ್ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ. ‘ನೀವು ಎಂದೆಂದಿಗೂ ಏಕೈಕ ನಟಿ. ನಿಮ್ಮ ನೆನಪು ಸದಾ ಇರುತ್ತದೆ. ಹ್ಯಾಪಿ ಹೆವೆನ್ಲಿ ಬರ್ತ್‌ಡೇ ಶ್ರೀದೇವಿ’ ಎಂದು ಬರೆದುಕೊಂಡಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಇದನ್ನೂ ಓದಿ: ಶ್ರೀದೇವಿ ಹಾದಿಯಲ್ಲಿ ಸಾಗಿದ ಜಾನ್ವಿ ಕಪೂರ್; ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ

ಶ್ರೀದೇವಿ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಅಭಿನಯ ಆರಂಭಿಸಿದ್ದರು. 1967ರ ತಮಿಳು ಚಿತ್ರ ‘ಕಂದನ್ ಕರುಣೈ’ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1972ರ ‘ರಾಣಿ ಮೇರಾ ನಾಮ್’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎನಿಸಿಕೊಂಡರು. 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಇವರಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಪುತ್ರಿಯರಿದ್ದಾರೆ. 2018ರಲ್ಲಿ ಶ್ರೀದೇವಿ ದುಬೈನಲ್ಲಿ ನಿಧನರಾದರು. ಅವರ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *