ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 8ರ ದಿನಭವಿಷ್ಯ

ಶಂಕರಾಚಾರ್ಯರಿಂದ ರಚಿತವಾದ ತ್ರಿಪುರಸುಂದರಿ ಅಷ್ಟಕಂ ಶ್ರವಣ ಮಾಡಿ. ಒತ್ತಡ, ಅಂಜಿಕೆ ಹಾಗೂ ಭಾವನೆಗಳ ಏರಿಳಿತದಿಂದ ಹೊರಬರುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ದೀರ್ಘ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮಗೆ ಅಂದುಕೊಂಡಿದ್ದೆಲ್ಲ ಸರಿ ಎಂದೆನಿಸದರೆ ಸಾಲದು, ವಾಸ್ತವಕ್ಕೆ ಹತ್ತಿರ ಇರುವ ರೀತಿಯಲ್ಲಿ ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇನ್ನು ನೀವಾಗಿಯೇ ಗಂಭೀರವಾದ ವಿಚಾರ ಮಾತನಾಡುತ್ತಿದ್ದೀರಿ ಎಂದಾದಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೇಳಿದ್ದೇ ಹೇಳಿ ಎದುರಿನಲ್ಲಿ ಇರುವವರಿಗೆ ನಿಮ್ಮ ಮೇಲೆ ಗೌರವ ಕಡಿಮೆ ಆಗುವಂತೆ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಒಳ್ಳೆ ಮೊತ್ತವೇ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು, ಮಾಡಿದ ಕೆಲಸ ಅಥವಾ ಪ್ರಾಜೆಕ್ಟ್ ನಿಂದ ಬಹಳ ಕಡಿಮೆ ಹಣ ಸಿಗಬಹುದು. ಮನೆಯಿಂದ ಹೊರಗೆ ಊಟ- ತಿಂಡಿ ಮಾಡುವಂಥವರು ಸ್ವಚ್ಛತೆ ಬಗ್ಗೆ ಜಾಸ್ತಿ ಗಮನ ನೀಡಿ. ಸ್ನೇಹಿತರು ಅಥವಾ ಸಂಬಂಧಿಕರ ಒತ್ತಡಕ್ಕೆ ಮಣಿದು, ಮನೆಯ ಹೊರಗಿನಊಟ ಮಾಡಿದಿರೋ ಆರೋಗ್ಯ ಕೈ ಕೊಡುವ ಎಲ್ಲ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿರೀಕ್ಷೆಗೂ ಮೀರಿದ ಆದಾಯ ಬರುವಂಥ ಸೂಚನೆಗಳು ದೊರೆಯಲಿವೆ. ಮನರಂಜನೆಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವಂಥವರಿಗೆ ಬಹಳ ಒಳ್ಳೆ ಸಮಯ ಇದಾಗಿರಲಿದೆ. ಸಂಗೀತಗಾರರು, ಸ್ಟ್ಯಾಂಡ್ ಅಪ್ ಕಮೆಡಿಯನ್ ಗಳು, ಮ್ಯಾಜಿಕ್ ಮಾಡುವಂಥವರು ಮತ್ತು ಅದನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಸಿಹಿ ಪದಾರ್ಥಗಳ ವಿಚಾರವಾಗಿ ಹತೋಟಿಯಲ್ಲಿರಿ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *