ಪೈರೈಟ್ ಸ್ಟೋನ್ ನಿಂದ ಸಿದ್ಧ ಮಾಡಿದಂಥ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಒತ್ತಡದಿಂದ ಹೊರಬರುವುದಕ್ಕೆ ದಾರಿ ಗೋಚರ ಆಗುತ್ತದೆ. ಇನ್ನು ಈ ದಿನ ಮುಖ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಬಿಳಿ ಬಣ್ಣದ ವಸ್ತ್ರವೊಂದನ್ನು ಜೇಬಿನಲ್ಲಿ ಇಟ್ಟುಕೊಂಡಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಖರ್ಚಿನ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ಪರಿಸ್ಥಿತಿ ಹಾಗೂ ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸ್ನೇಹಿತರ ಜತೆಗೆ ಮಾತುಕತೆ ಬೇಡ. ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವವರಿಗೆ ಒಂದೇ ಸಮಯಕ್ಕೆ ಹಲವು ಕೆಲಸಗಳು ಏಕ ಕಾಲಕ್ಕೆ ಮಾಡಬೇಕಾದ ಒತ್ತಡ ಸೃಷ್ಟಿ ಆಗುತ್ತದೆ. ದೂರದ ಸ್ಥಳದಲ್ಲಿ ಬಿಟ್ಟು ಓದಿಸುತ್ತಿರುವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಪ್ರೀತಿ- ಪ್ರೇಮ, ಮದುವೆಗೆ ಸಂಬಂಧಿಸಿದಂತೆ ಭಾವನಾತ್ಮಕ ಕ್ಷಣಗಳಲ್ಲಿ ಸಮಾಧಾನದಿಂದ ನಿರ್ಧಾರ ಮಾಡುವುದು ಸವಾಲಾಗಿರುತ್ತದೆ. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ ಮಾಡಿದಲ್ಲಿ ಅದರ ಅಡ್ಡ ಪರಿಣಾಮ ನಿಮ್ಮ ಮೇಲೇ ಆಗಲಿದೆ. ಜಂಕ್ ಫುಡ್ ಗಳಿಂದ ಈ ದಿನ ಸಾಧ್ಯವಾದಷ್ಟೂ ದೂರ ಇರುವುದು ಒಳ್ಳೆಯದು. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉದ್ಯೋಗದ ಆಫರ್ ಬರಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಾ ಇರುವವರು ಈ ದಿನ ಅಡ್ವಾನ್ಸ್ ಮಾಡುವಂಥ ಯೋಗ ಇದೆ. ಆದಾಯ ಹೆಚ್ಚು ಮಾಡಿಕೊಳ್ಳಲು ವಿವಿಧ ಯೋಜನೆಗಳನ್ನು ರೂಪಿಸಲಿದ್ದೀರಿ. ನಿಮ್ಮದೇ ಅಸ್ತಿಯೊಂದನ್ನು ಮಾರುವ ಆಲೋಚನೆ ಸಹ ಬರಬಹುದು. ಹೂಡಿಕೆಗೆ ಆ ಹಣದ ಬಳಕೆ ಮಾಡುವ ಚಿಂತನೆ ಇರಲಿದೆ. ಇಷ್ಟು ಸಮಯ ನಿಮ್ಮ ಜೊತೆಗೆ ಸ್ನೇಹ- ಸೌಹಾರ್ದದಿಂದ ಇರುವ ವ್ಯಕ್ತಿ ಕೆಲವು ವಿಷಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ಕಿರಿಕಿರಿ ಮಾಡಲಿದೆ.
ಲೇಖನ- ಸ್ವಾತಿ ಎನ್.ಕೆ.
