ಭಗವದ್ಗೀತೆಯ ಒಂದು ಅಧ್ಯಾಯವನ್ನಾದರೂ ಸಂಜೆಯ ಹೊತ್ತಿಗೆ ಓದುವುದಕ್ಕೆ ಪ್ರಯತ್ನಿಸಿ. ಅಥವಾ ಕೇಳಿಸಿಕೊಳ್ಳಿ. ಯಾರಿಗೆ ಉದ್ಯೋಗ, ದಾಂಪತ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿ ತೀವ್ರವಾದ ಒತ್ತಡ- ಗೊಂದಲ ಇದೆಯೋ ಅಂಥವರಿಗೆ ಇದರಿಂದ ಹೊರಗೆ ಬರುವ ಮಾರ್ಗ ಗೋಚರ ಆಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ದಿನ ಬಹುತೇಕ ಕೆಲಸಗಳಿಂದಲೇ ತುಂಬಿ ಹೋಗಲಿದೆ. ಜಾಣ್ಮೆಯ ಮತ್ತು ಮಿತವಾದ ಮಾತು ಗೌರವ ತರುತ್ತದೆ. ಇನ್ನು ಕೆಲವು ಕಡೆ ಮಾತನಾಡುವುದಕ್ಕಿಂತ ನಿಮ್ಮ ಕಾರ್ಯವೇ ಮುಖ್ಯವೆನ್ನಿಸುತ್ತದೆ. ಅಂದುಕೊಂಡಂತೆ ನಿಮಗೆ ಬರಬೇಕಾದ ಆದಾಯ ಬಾರದೆ ತಡವಾಗಲಿದೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ, ಅಗತ್ಯವಿರುವಷ್ಟನ್ನು ಮಾತ್ರ ಖರ್ಚು ಮಾಡಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮಗೆ ಬೆಂಬಲವಾಗಿ ಇರುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಪ್ರೀತಿಯಲ್ಲಿ ನಂಬಿಕೆ ಅತ್ಯಂತ ಮುಖ್ಯ, ಅನುಮಾನದಿಂದ ನೆಮ್ಮದಿ ಹಾಳಾಗುತ್ತದೆ. ತಲೆನೋವು ಅಥವಾ ಮಾನಸಿಕ ದಣಿವು ಕಾಣಲಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಳ್ಳಿ. ಏಕಾಗ್ರತೆ ಸಾಧಿಸುವುದಕ್ಕೆ ಹರಸಾಹಸ ಪಡುತ್ತಿದ್ದಲ್ಲಿ ಮೊದಲಿಗೆ ಮನಸ್ಸನ್ನು ನಿಯಂತ್ರಿಸಿ. ಸ್ನೇಹಿತರೊಂದಿಗೆ ಹೆಚ್ಚಾಗಿ ವಾಗ್ವಾದ ಬೇಡ, ನೀವು ಹೇಳಬೇಕಾದ ವಿಷಯಗಳನ್ನು ಸರಳವಾಗಿ ತಿಳಿಸಿ. ದೈವಸ್ಮರಣೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ನೆಮ್ಮದಿಯೂ ಸಿಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಹೊಸ ಅವಕಾಶಗಳೊಂದಿಗೆ ನಿಮಗೆ ಈ ದಿನ ಆರಂಭವಾಗಲಿದೆ. ಕೆಲಸದಲ್ಲಿ ನಿಮಗೆ ಸಿಗುವಂಥ ಅವಕಾಶಗಳು ನಿಮ್ಮ ಕೌಶಲಕ್ಕೆ ಸರಿಯಾಗಿ ಹೊಂದಾಣಿಕೆ ಆಗಲಿವೆ. ಅನಗತ್ಯವಾಗಿ ಯಾವುದರಲ್ಲಿಯೂ ತಡ ಆಗುವುದನ್ನು ತಪ್ಪಿಸಿ, ಕೆಸ್ಪಷ್ಟ ಯೋಜನೆ ಇರಿಸಿಕೊಳ್ಳಿ. ಹೊಸದಾಗಿ ಹೂಡಿಕೆ ಮಾಡುವರಿಗೆ ಜಾಗ್ರತೆ ಅಗತ್ಯ. ಇನ್ನು ಇತರರ ಬಲವಂತಕ್ಕೋ ಅಥವಾ ಒತ್ತಡಕ್ಕೋ ಹಣದ ಹೂಡಿಕೆ ಮಾಡಬೇಡಿ.
ಲೇಖನ- ಸ್ವಾತಿ ಎನ್.ಕೆ.
