
ಈ ದಿನ ಕಾತ್ಯಾಯಿನಿ ದೇವಿಯ ಸ್ಮರಣೆ ಮಾಡಿ. ಮನಸ್ಸಿನ ಗೊಂದಲ, ತಳಮಳಗಳ ನಿವಾರಣೆಗೆ ಕಾತ್ಯಾಯಿನಿ ದೇವಿಯ ಮಂತ್ರ ಜಪಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಹೊಂದಾಣಿಕೆಗೆ ಅವಕಾಶ ಇರುವಂಥದ್ದನ್ನು ನಿಮ್ಮ ಮಾತಿನ ಕಾರಣದಿಂದ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಈ ದಿನ ಸಮಯ ಸಿಕ್ಕಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೊರಡುವ ಮುನ್ನ ಕಾತ್ಯಾಯಿನಿ ದೇವಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡುವುದು ಒಳ್ಳೆಯದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗಲಿದೆ. ಯಾವ ಕೆಲಸವನ್ನು ಮಾಡಬಾರದು, ಯಾವ ವ್ಯಕ್ತಿಯ ಜತೆಗೆ ಮಾತನಾಡಬಾರದು ಎಂದುಕೊಂಡಿರುತ್ತೀರೋ ಅದೇ ಕೆಲಸವನ್ನು ಮಾಡುತ್ತೀರಿ ಹಾಗೂ ನೀವಾಗಿಯೇ ಆ ವ್ಯಕ್ತಿಯ ಜತೆಗೆ ಮಾತನಾಡುತ್ತೀರಿ. ಹಾಗಂತ ನೀವು ಮಾನಸಿಕವಾಗಿ ದುರ್ಬಲರಾದಿರಿ ಅಂತಲ್ಲ. ಯಾವುದೇ ಮನಸ್ಸಿನ ಕಹಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನಿಮಗೆ ಇಷ್ಟ ಇರುವುದಿಲ್ಲ ಎಂದರ್ಥ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಮನಸ್ತಾಪಗಳು- ಅಭಿಪ್ರಾಯ ಭೇದಗಳು ನಿವಾರಣೆ ಆಗಲಿವೆ. ತಂದೆ- ತಾಯಿಯ ಆರೋಗ್ಯ ವಿಚಾರ ಒಂದಿಷ್ಟು ಚಿಂತೆಗೆ ಕಾರಣ ಆಗಬಹುದು. ಆದರೆ ಅದಕ್ಕೆ ಸೂಕ್ತ ಪರಿಹಾರೋಪಾಯಗಳು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ಮಿಶ್ರ ಫಲಿತಾಂಶ ದೊರೆಯಲಿದೆ. ಕೆಲವು ಬೆಳವಣಿಗೆಗಳು ನಿಮಗೆ ಪೂರಕವಾಗಿಯೂ ಮತ್ತೆ ಕೆಲವು ಬಾಧಕವಾಗಿಯೂ ಪರಿಣಮಿಸಬಹುದು.
ಲೇಖನ- ಸ್ವಾತಿ ಎನ್.ಕೆ.