ಸಂಜು ಫಾರ್ಮ್​ ಪ್ರಶ್ನಿಸುವವರು, ತಿಲಕ್ ವಿಷಯದಲ್ಲಿ ಗಪ್ ಚುಪ್: ಶ್ರೀಕಾಂತ್ ಆಕ್ರೋಶ – Kannada News | Srikkanth Slams Double Standards In Samson vs Varma Debate

ಟಿ20 ವಿಶ್ವ ಚಾಂಪಿಯನ್ ಭಾರತ ತಂಡವು ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಹೀನಾಯ ಸೋಲಿನ ಬೆನ್ನಲ್ಲೇ ಆಡುವ ಬಳಗದಿಂದ ಸಂಜು ಸ್ಯಾಮ್ಸನ್ ಹೊರಬಿದ್ದಿದ್ದಾರೆ. ಇದಕ್ಕೆ ನೀಡಲಾದ ಕಾರಣ ಕಳಪೆ ಫಾರ್ಮ್​. ಆದರೆ ಇದೇ ವಿಷಯವನ್ನು ತಿಲಕ್ ವರ್ಮಾ ವಿಚಾರದಲ್ಲಿ ಮುಂದಿಡಲಾಗುತ್ತಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 125 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಕಾಂತ್, ಟೀಮ್ ಇಂಡಿಯಾ ಆಯ್ಕೆ ಸಮತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ಲೇಯಿಂಗ್ ಇಲೆವೆನ್ ಬದಲಿಸಿರುವ ಟೀಮ್ ಮ್ಯಾನೇಜ್ಮೆಂಟ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಂಗ್ಲೆಂಡ್​ನ ವೇಗ ಹಾಗೂ ಬೌನ್ಸ್ ಪಿಚ್‌ಗಳಲ್ಲಿ ಶಾರ್ಟ್-ಪಿಚ್ ಎಸೆತಗಳನ್ನು ಎದುರಿಸಲು ತಿಲಕ್ ವರ್ಮಾ ಹೆದರುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗಿಂತ ಮುಂಚಿತವಾಗಿ ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿ, ಮ್ಯಾನೇಜ್‌ಮೆಂಟ್ ತಿಲಕ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.

ನಿಜ ಹೇಳಬೇಕೆಂದರೆ, ಕ್ರೀಸ್‌ನಲ್ಲಿ ತಿಲಕ್ ವರ್ಮಾ ಸಂಪೂರ್ಣವಾಗಿ ‘ಕ್ಲೂಲೆಸ್’ ಆಗಿ ಕಾಣುತ್ತಿದ್ದಾರೆ. ಅವರಿಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ಇಂತಹ ಆಟಗಾರನನ್ನು ಭವಿಷ್ಯದ ನಾಯಕ ಎಂದು ಬಿಂಬಿಸಿ ಅವರಿಗೆ ತಂಡದಲ್ಲಿ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿರುವುದೇ ಅಚ್ಚರಿ.

ಇಲ್ಲಿ ಸಂಜು ಸ್ಯಾಮ್ಸನ್ ಫಾರ್ಮ್​ ಪ್ರಶ್ನಿಸಿದವರೆಇಗೆ, ತಿಲಕ್ ವರ್ಮಾ ಅವರ ಕಳಪೆ ಫಾರ್ಮ್ ಕಾಣಿಸುತ್ತಿಲ್ಲ. ನನ್ನ ಪ್ರಕಾರ, ಫಾರ್ಮ್‌ನಲ್ಲಿಲ್ಲದ ಆಟಗಾರನನ್ನು ಬೆಂಬಲಿಸುವ ಬದಲು, ಸಂಜು ಸ್ಯಾಮ್ಸನ್ ಅವರಿಗೆ ತಕ್ಷಣವೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬೇಕು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯಿಸಿದ್ದಾರೆ.

ತಿಲಕ್ ವರ್ಮಾ ಔಟ್ ಆಫ್​ ಫಾರ್ಮ್​​ನಲ್ಲಿದ್ದಾರಾ?

ಕೃಷ್ಣಮಾಚಾರಿ ಶ್ರೀಕಾಂತ್ ಅವರ ಆರೋಪವನ್ನು ಪರಿಶೀಲಿಸಿದಾಗ ಭಾರತ ತಂಡದ ಉಪನಾಯಕ ತಿಲಕ್ ವರ್ಮಾ ಔಟ್ ಆಫ್​ ಫಾರ್ಮ್​ನಲ್ಲಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ: ಕೇವಲ 19 ರನ್​.
  • ಐರ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯ: 55 ರನ್​ ಬಾರಿಸಲು ತೆಗೆದುಕೊಂಡಿದ್ದು 46 ಎಸೆತಗಳನ್ನು.
  • ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ: ಕೇವಲ 13 ರನ್​.
  • ಇಂಗ್ಲೆಂಡ್ ವಿರುದ್ಧ ಎರಡನ ಟಿ20 ಪಂದ್ಯ: 24 ರನ್​ಗಳಿಸಿ ಔಟ್.
  • ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯ: 11 ಎಸೆತಗಳಲ್ಲಿ ಕೇವಲ 3 ರನ್​.

ಇದನ್ನೂ ಓದಿ: 5 ಗಂಟೆ 15 ನಿಮಿಷಗಳ ಕಾದಾಟ: ಹೊಸ ಇತಿಹಾಸ  ನಿರ್ಮಿಸಿದ ನೊವಾಕ್ ಜೊಕೊವಿಚ್

ಈ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಯಾರೂ ಸಹ ತಿಲಕ್ ವರ್ಮಾ ಅವರ ಸ್ಥಾನದ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಲ್ಲಿ ಸಂಜು ಸ್ಯಾಮ್ಸನ್​ ಎರಡು ಮ್ಯಾಚ್​ಗಳಲ್ಲಿ ವಿಫಲರಾಗಿದ್ದಕ್ಕೆ ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಟ್ಟಿದ್ದಾರೆ. ಆದರೆ ತಿಲಕ್ ವರ್ಮಾಗೆ ಸತತ ಅವಕಾಶಗಳನ್ನು ನೀಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

Source link

Leave a Reply

Your email address will not be published. Required fields are marked *