ಸಂಪುಟ ಸೇರಲು ಕಸರತ್ತು: ಡಿಕೆ ಶಿವಕುಮಾರ್​ ನಿವಾಸಕ್ಕೆ ಮಾಜಿ ಸಚಿವರು, ಶಾಸಕರ ಪರೇಡ್‌!

ಬೆಂಗಳೂರು, ಮೇ 31: ಸರ್ಕಾರ ರಚಿಸಲು ಡಿಕೆ ಶಿವಕುಮಾರ್​​ಗೆ ರಾಜ್ಯಪಾಲರು ಆಹ್ವಾನ ನೀಡ್ತಿದ್ದಂತೆ, ಭದ್ರತೆ ಹೆಚ್ಚಾಗಿದೆ. ನಿಯೋಜಿತ ಸಿಎಂ ಆಗಿರುವ ಡಿಕೆ ಶಿವಕುಮಾರ್​​ (DK Shivakumar) ಇದೀಗ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದು, ಅವರ ನಿವಾಸಕ್ಕೆ ಮಾಜಿ ಸಚಿವರು ಮತ್ತು ಶಾಸಕರ ದಂಡೇ ಹರಿದು ಬರುತ್ತಿದೆ. ಡಿಕೆ ಶಿವಕುಮಾರ್​ನ್ನು ಭೇಟಿ ಮಾಡಿ ವಿಶ್‌ ಮಾಡಿದ್ದು, ಜೊತೆಗೆ ಸಚಿವ ಸ್ಥಾನಕ್ಕೂ ಡಿಮ್ಯಾಂಡ್​ ಕೂಡ ಮಾಡಿದ್ದಾರೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್​​ ನಿವಾಸಕ್ಕೆ ಪೊಲೀಸ್‌ ಭದ್ರತೆ, ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು
  • ಹರಿದು ಬರುತ್ತಿದೆ ಮಾಜಿ ಸಚಿವರು ಮತ್ತು ಶಾಸಕರ ದಂಡು
  • ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ

ಯಾರೆಲ್ಲಾ ಡಿಕೆ ಶಿವಕುಮಾರ್​ ನಿವಾಸಕ್ಕೆ ಭೇಟಿ

ನಿನ್ನೆಯಷ್ಟೇ ಸಿಎಲ್‌ಪಿ ನಾಯಕನಾಗಿ ಆಯ್ಕೆ ಆಗಿರಿವ ಡಿ.ಕೆ ಶಿವಕುಮಾರ್‌, ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಡಿಕೆ ಶಿವಕುಮಾರ್​ ನಿಯೋಜಿತ ಸಿಎಂ ಆಗ್ತಿದ್ದಂತೆ ಪ್ರೋಟೋಕಾಲ್ ಪ್ರಕಾರ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ನಿರ್ಬಂಧ ಹಾಕಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ನಿವಾಸ ಪವರ್ ಸೆಂಟರ್ ಆಗಿ ಬದಲಾಗಿದ್ದು, ಮಾಜಿ ಸಚಿವರಾದ ಎಂಬಿ ಪಾಟೀಲ್‌, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಕೆ.ಹೆಚ್‌. ಮುನಿಯಪ್ಪ, ಟಿಬಿ ಜಯಚಂದ್ರ ಮತ್ತು ಶಾಸಕರಾದ ಪುಟ್ಟರಂಗಶೆಟ್ಟಿ, ಅಶೋಕ್ ಪಟ್ಟಣ್, ಕೆ.ವೈ.ನಂಜೇಗೌಡ, ಗಣೇಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ಸಂಪುಟ ರಚನೆ ಕಸರತ್ತು: ನಾಳೆ ದೆಹಲಿಗೆ ಡಿಕೆ ಶಿವಕುಮಾರ್​ ಪಯಣ

ಸಾಲು ಸಾಲು ನಾಯಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಂತೆ, ಡಿಕೆ ಶಿವಕುಮಾರ್​​ ನಾಳೆಯೇ ದೆಹಲಿಗೆ ಹಾರಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಸಚಿವರ ಹೆಸರು ಫೈನಲ್ ಮಾಡಲು ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಸಚಿವ ಸಂಪುಟ ಕುರಿತು ಚರ್ಚಿಸಲಿರುವ ಡಿಕೆ ಶಿವಕುಮಾರ್​ ತಮ್ಮ ಜೊತೆ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಮುಂದಿನ ಪ್ರಕ್ರಿಯೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ?: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ನಿಯೋಜಿತ ಸಿಎಂ

ಸಿದ್ದರಾಮಯ್ಯ ಕೂಡ ಮತ್ತೆ ನಾಳೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಬೆಳಗ್ಗೆ 9.30ಕ್ಕೆ ದೆಹಲಿಗೆ ತೆರಳಲಿದ್ದಾರೆ. ತಮ್ಮ ಆಪ್ತರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಯೋಜಿತ ಸಿಎಂ ಡಿಕೆ ಶಿವಕುಮಾರ್​​, ಯಾರು ಯಾರು  ಸಚಿವರಾಗುತ್ತಾರೆ ಹೈಕಮಾಂಡ್ ನಿರ್ಧರಿಸುತ್ತೆ, ಈ ಬಗ್ಗೆ ನನಗೆ ಇನ್ನೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಹುದ್ದೆಗಳು ಸೃಷ್ಟಿಯಾಗುತ್ತೋ? ಇಲ್ಲವೋ? ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ

ಇನ್ನು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರಿಗೆ ಹೈಕಮಾಂಡ್ ಶಾಕ್​ ನೀಡಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ. ಜೂನ್ 3ರ ನಂತರ ನಿರ್ಧಾರ ಮಾಡುತ್ತೇವೆ. ಸಿಎಂ ಜೊತೆ ಎಷ್ಟು ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಗೊತ್ತಿಲ್ಲ. 15 ದಿನದ ಬಳಿಕ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗಲಿದೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಹೊಂದಾಣಿಕೆ ಇರಬೇಕು, ಅಂತಹ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತೆ ಎಂದಿದ್ದಾರೆ.

ವರದಿ: ಬ್ಯೂರೋ ರಿಪೋರ್ಟ್‌ ಟಿವಿ9.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *