ಇತ್ತೀಚೆಗೆ ನಡೆದ ಎಐ ಕಾರ್ಯಕ್ರಮವೊಂದರಲ್ಲಿ ಸರ್ವಂ ಪ್ರಸ್ತುತಿ ವೀಕ್ಷಿಸಿದ ಪ್ರಧಾನಿ ಮೋದಿImage Credit source: PTI
ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ (Sarvam AI) ತನ್ನ ‘Epoch 2026’ ಎಐ ಸಮ್ಮೇಳನದಲ್ಲಿ ಹಲವು ಪ್ರಮುಖ ತಂತ್ರಜ್ಞಾನ ನವೀಕರಣಗಳು ಮತ್ತು ಹೊಸ ಎಐ ಮಾಡೆಲ್‌ಗಳನ್ನು ಘೋಷಿಸಿದೆ. ಭಾರತದಲ್ಲೇ ಸಂಪೂರ್ಣವಾಗಿ 1 ಟ್ರಿಲಿಯನ್‌ಗಿಂತಲೂ ಹೆಚ್ಚು (1 Trillion+) ಪ್ಯಾರಾಮೀಟರ್ ಹೊಂದಿರುವ ಬೃಹತ್ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಸರ್ವಂ ಸಂಸ್ಥೆ ಘೋಷಿಸಿದೆ. ಇದು ಕೋಡಿಂಗ್, ಸೈಬರ್ ಸೆಕ್ಯುರಿಟಿ, ವಿಜ್ಞಾನ ಹಾಗೂ ಸಿಮ್ಯುಲೇಶನ್ ಕ್ಷೇತ್ರಗಳಲ್ಲಿ ಓಪನ್ ಎಐ (OpenAI) ಮತ್ತು ಆಂಥ್ರೋಪಿಕ್ (Anthropic) ನಂತಹ ಜಾಗತಿಕ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ನೀಡಲಿದೆ.
ಸರ್ವಂ 105B – ಅತ್ಯಂತ ಅಗ್ಗದ ಹಾಗೂ ವೇಗದ ಮಾಡೆಲ್
ಸರ್ವಂ ತನ್ನ Sarvam 105B ಮಾಡೆಲ್ ಅನ್ನು ಮತ್ತಷ್ಟು ಸುಧಾರಿಸಿದೆ. ಇದು OpenAI ನ GPT-5.4 Mini ಗಿಂತ 5.5 ಪಟ್ಟು ಅಗ್ಗವಾಗಿದೆ ಮತ್ತು Google ನ Gemini 3.5 Flash ಗಿಂತ 11 ಪಟ್ಟು ಅಗ್ಗವಾಗಿದೆ. ಧ್ವನಿ ಕರೆ (Voice calls) ಹಾಗೂ ಸೂಚನೆಗಳನ್ನು ಪಾಲಿಸುವ ಸಾಮರ್ಥ್ಯದಲ್ಲಿ ಇದು ಉತ್ತಮ ಕಾರ್ಯಕ್ಷಮತೆ ತೋರಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸರ್ವಂ ವಿಷನ್ 2.0 ಮತ್ತು ವಿಷನ್ ಎಡ್ಜ್
ಡಾಕ್ಯುಮೆಂಟ್ ಮತ್ತು ಪಠ್ಯ ಗುರುತಿಸುವಿಕೆಗೆ (OCR) Vision 2.0 ಬಿಡುಗಡೆ ಮಾಡಲಾಗಿದೆ. ಇದು ಭಾರತೀಯ ಕೈಬರಹ (Handwriting) ಮತ್ತು ಕೋಷ್ಟಕಗಳನ್ನು (Tables) ಸುಲಭವಾಗಿ ಅರ್ಥೈಸಿಕೊಳ್ಳುತ್ತದೆ. ಸರ್ವಂನ ಈ Vision Edge ಅನ್ನು ಒಡಿಶಾ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬಳಸುತ್ತಿದೆ.
ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ
ವಾಯ್ಸ್ ಮಾಡೆಲ್: ಸರಸ್ V4 ಮತ್ತು ಬುಲ್‌ಬುಲ್ V4
- Saras V4: ಧ್ವನಿ ಗುರುತಿಸುವಿಕೆ (Speech Recognition) ಮಾದರಿಯಾಗಿದ್ದು, ಹಿಂದಿ, ಬೆಂಗಾಲಿ ಜೊತೆಗೆ ಒಡಿಯಾ, ಸಂಸ್ಕೃತ ಮತ್ತು ಮಣಿಪುರಿಯಂತಹ ಭಾಷೆಗಳನ್ನು ಸರಾಗವಾಗಿ ಟ್ರಾನ್ಸ್‌ಸ್ಕ್ರೈಬ್ ಮಾಡುತ್ತದೆ.
- Bulbul V4: ಪಠ್ಯವನ್ನು ಧ್ವನಿಯಾಗಿ ಬದಲಾಯಿಸುವ (Text-to-Speech) ಮಾಡೆಲ್ ಆಗಿದ್ದು, ನಗು ಮತ್ತು ಭಾವನೆಗಳನ್ನು ಧ್ವನಿಯಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದೆ.
ಸರ್ವಂ ‘Kaze’ ಎಐ ಸ್ಮಾರ್ಟ್ ಗ್ಲಾಸ್
ದೃಷ್ಟಿಹೀನರಿಗೆ ನೆರವಾಗಲು Sarvam Kaze ಸ್ಮಾರ್ಟ್ ಕಣ್ಣಿನ ಕನ್ನಡಕವನ್ನು ಪ್ರದರ್ಶಿಸಲಾಯಿತು. ಈ ಕನ್ನಡಕವು (AI Smartglasses) ಕ್ಯಾಮೆರಾ ಬಳಸಿ ಬಸ್ ಮಾರ್ಗಗಳು, ದೂರ ಹಾಗೂ ತಲುಪುವ ಸಮಯವನ್ನು ಗುರುತಿಸಿ ದೃಷ್ಟಿಹೀನರಿಗೆ ಮಾಹಿತಿ ನೀಡುತ್ತದೆ.
30 ಸೆಕೆಂಡುಗಳಲ್ಲಿ ಭಾರತೀಯ ಫೋನ್ ಸಂಖ್ಯೆ ಬಾಡಿಗೆಗೆ
ಬಳಕೆದಾರರು ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಭಾರತೀಯ ಫೋನ್ ಸಂಖ್ಯೆಯನ್ನು ಬಾಡಿಗೆಗೆ ಪಡೆಯುವ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ: ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ
ಭಾರತ ಡಿಜಿಟಲ್ ಕಾಲೊನಿಯಾಗುವ ಭೀತಿ: ವಿವೇಕ್ ರಾಘವನ್
ಭಾರತದಲ್ಲಿ ಪೂರ್ಣ ಪ್ರಮಾಣದ ಎಐ ಸ್ಟ್ಯಾಕ್ ನಿರ್ಮಾಣವಾಗದಿದ್ದರೆ ಮತ್ತು ಇತರ ವಿದೇಶೀ ಎಐ ಪ್ಲಾಟ್ಫಾರ್ಮ್ಗಳಿಗೆ ಭಾರತೀಯ ಪರ್ಯಾಯ ಸೃಷ್ಟಿಯಾಗದಿದ್ದರೆ ದೇಶವು ಡಿಜಿಟಲ್ ಕಾಲೊನಿಯಾಗುವುದು ನಿಶ್ಚಿತ ಎಂದು ಸರ್ವಂ ಎಐ ಸಹ-ಸಂಸ್ಥಾಪಕ ವಿವೇಕ್ ರಾಘವನ್ ಕಳವಳ ವ್ಯಕ್ತಪಡಿಸಿದ್ದಾರೆ.
ಎಐ ಮಾಡಲ್ ನಿರ್ಮಾಣ ಉದ್ದೇಶದೊಂದಿಗೆ ಆರಂಭವಾಗಿದ್ದ ಸರ್ವಂ ಎಐ ಇದೀಗ ತನ್ನ ಸ್ಟ್ರಾಟಿಜಿಯನ್ನು ವಿಸ್ತರಿಸಿಕೊಂಡಿದೆ. ಫೌಂಡೇಶನಲ್ ಮಾಡಲ್ ಆಚೆ ದೃಷ್ಟಿ ಇಟ್ಟಿರುವ ಸಂಸ್ಥೆಯು, ಎಐ ಅನ್ನು ವ್ಯಾಪಕವಾಗಿ ನಿಯೋಜನೆ ಮಾಡಲು ಸಾಧ್ಯವಾಗಿಸುವಂತಹ ಮೂಲಸೌಕರ್ಯವನ್ನು ನಿರ್ಮಿಸುವ ಗುರಿ ಇಟ್ಟಿದೆ. ಈ ನಿಟ್ಟಿನಲ್ಲಿ ಒಂದು ಟ್ರಿಲಿಯನ್ ಪ್ಯಾರಮೀಟರ್ನ ಎಐ ಮಾಡಲ್ ನಿರ್ಮಿಸಲು ಯೋಜಿಸಿರುವುದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಚೀನಾದ ಕಿಮಿ ಕೆ3, ಲಾಂಗ್ ಕ್ಯಾಟ್ 2.0, ಡೀಪ್ ಸೀಕ್ ವಿ4-ಪ್ರೋ ಮಾಡಲ್ಗಳು, ಅಮೆರಿಕದ ಕ್ಲಾಡ್, ಓಪನ್ಎಐ ಸಂಸ್ಥೆಗಳ ಮಾಡಲ್ಗಳು ಟ್ರಿಲಿಯನ್ ಪ್ಯಾರಾಮೀಟರ್ಗಳ ಗಡಿ ದಾಟಿವೆ. ಇತ್ತೀಚೆಗೆ ಬಿಡುಗಡೆಯಾದ ಚೀನಾದ ಕಿಮಿ ಕೆ3 ಮಾಡಲ್ 2.8 ಟ್ರಿಲಿಯನ್ ಪ್ಯಾರಾಮೀಟರ್ನದ್ದಾಗಿದ್ದೆಂದು ಸದ್ದು ಮಾಡಿದೆ.
ಇದೇ ವೇಳೆ, HCL Tech ನೇತೃತ್ವದ ಹೂಡಿಕೆ ಸುತ್ತಿನಲ್ಲಿ $234 ಮಿಲಿಯನ್ ನಿಧಿ ಸಂಗ್ರಹಿಸಿದ ನಂತರ ಸರ್ವಂ ಎಐ ಸಂಸ್ಥೆಯ ಮೌಲ್ಯವು $1.5 ಬಿಲಿಯನ್ ದಾಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 12:46 pm, Fri, 31 July 26
