ಸಿಹಿ ಪದಾರ್ಥಗಳು ಇರುವಲ್ಲಿ, ಇರುವೆಗಳು (ants) ಸುಳಿದಾಡುವುದು ಸರ್ವೆ ಸಾಮಾನ್ಯ. ಅದರಲ್ಲೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಕ್ಕರೆ ಡಬ್ಬಿಗಳು ಇರುವೆಗಳು ಬಹು ಬೇಗನೇ ಆಕರ್ಷಿಸುತ್ತವೆ. ಹೌದು ಸಕ್ಕರೆ ಡಬ್ಬಿಯನ್ನು ಎಷ್ಟೇ ಬಿಗಿಯಾಗಿ ಮುಚ್ಚಿದರೂ ಸಹ ಇರುವೆಗಳು ಸಕ್ಕರೆ ಡಬ್ಬಿಯನ್ನು ಮುತ್ತಿಕೊಳ್ಳುತ್ತವೆ. ಇದರಿಂದ ಸಕ್ಕರೆಯೂ ಹಾಳಾದಂತಾಗುತ್ತದೆ, ಪದೇ ಪದೇ ಡಬ್ಬವನ್ನು ಕೂಡ ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಹೀಗಿರುವಾಗ ಈ ಒಂದು ವಸ್ತುವನ್ನು ಸಣ್ಣ ಚೀಲದಲ್ಲಿಟ್ಟು ಸಕ್ಕರೆ ಡಬ್ಬದೊಳಗೆ ಇಡುವುದರಿಂದ, ಇರುವೆಗಳು ಆ ಕಡೆ ಬಾರದಂತೆ ನೋಡಿಕೊಳ್ಳಬಹುದು. ಹಾಗಿದ್ರೆ ಯಾವ ವಸ್ತುವನ್ನು ಸಕ್ಕರೆ ಡಬ್ಬದೊಳಗೆ ಇಡಬೇಕು ಎಂಬುದನ್ನು ನೋಡೋಣ ಬನ್ನಿ.
ಸಕ್ಕರೆ ಡಬ್ಬದೊಳಗೆ ಇರುವೆಗಳು ಪ್ರವೇಶಿಸದಂತೆ ನೋಡಿಕೊಳ್ಳಲು ಏನು ಮಾಡಬೇಕು?
ಇರುವೆಗಳನ್ನು ಸಕ್ಕರೆಯಿಂದ ದೂರವಿಡಲು, ನೀವು ಸಕ್ಕರೆ ಡಬ್ಬಿಯಲ್ಲಿ ಲವಂಗದ ಪ್ಯಾಕೆಟ್ ಅನ್ನು ಇಡಬಹುದು. ಲವಂಗದ ಬಲವಾದ ನೈಸರ್ಗಿಕ ಸುವಾಸನೆ ಮತ್ತು ಅದರಲ್ಲಿರುವ ಎಣ್ಣೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ನೀವು ನೇರವಾಗಿ ಸಕ್ಕರೆ ಡಬ್ಬಿಯಲ್ಲಿ ಲವಂಗವನ್ನು ಹಾಕಲು ಬಯಸದಿದ್ದರೆ, ನೀವು 8 ರಿಂದ 10 ಲವಂಗವನ್ನು ಒಂದು ಸಣ್ಣ ಪ್ಯಾಕೆಟ್‌ನಲ್ಲಿಟ್ಟು ಡಬ್ಬಿಯ ಮೂಲೆಯಲ್ಲಿ ಇಡಬಹುದು. ಇದರಿಂದ ಇರುವೆಗಳು ಸಕ್ಕರೆ ಡಬ್ಬದ ಬಳಿ ಸುಳಿಯುವುದೇ ಇಲ್ಲ.
ಇರುವೆಗಳನ್ನು ಓಡಿಸಲು ಲವಂಗ ಹೇಗೆ ಸಹಾಯ ಮಾಡುತ್ತದೆ?
ಲವಂಗವು ಯುಜೆನಾಲ್ ಎಂಬ ನೈಸರ್ಗಿಕ ಅಂಶವನ್ನು ಹೊಂದಿರುತ್ತದೆ, ಇದು ತುಂಬಾ ಬಲವಾದ ಸುವಾಸನೆಯನ್ನು ಹೊಂದಿದ್ದು, ಈ ಸುವಾಸನೆಯು ಮನುಷ್ಯರಿಗೆ ಆಹ್ಲಾದಕರವಾಗಿರಬಹುದು, ಆದರೆ ಇರುವೆಗಳು ಮತ್ತು ಸಣ್ಣ ಕೀಟಗಳಿಗೆ ಇಷ್ಟವಾಗುವುದಿಲ್ಲ. ಇರುವೆಗಳು ತಮ್ಮ ದಾರಿಯನ್ನು ಕಂಡುಕೊಳ್ಳಲು ಪರಿಮಳದ ಸೂಚನೆಗಳನ್ನು ಬಳಸುತ್ತವೆ. ಆದರೆ ಲವಂಗದ ಬಲವಾದ ಪರಿಮಳಯುಕ್ತ ವಾಸನೆ ಇರುವೆಗಳ ತಮ್ಮ ದಾರಿ ಮತ್ತು ದಿಕ್ಕನ್ನು ಕಂಡುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಇರುವೆಗಳು ಲವಂಗ ಮತ್ತು ದಾಲ್ಚಿನ್ನಿಯಂತಹ ವಸ್ತುಗಳಿರುವತ್ತ ಸುಳಿಯುವುದಿಲ್ಲ.
ಇದನ್ನೂ ಓದಿ: ಮನೆಯಲ್ಲಿ ಈ ಒಂದು ಸಸಿ ನೆಟ್ಟರೆ ಹಲ್ಲಿಗಳ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು
ಇರುವೆಗಳನ್ನು ಓಡಿಸಲು ಬೇರೆ ಯಾವ ವಸ್ತುಗಳು ಸಹಾಯ ಮಾಡಬಹುದು?
ನಿಮ್ಮ ಬಳಿ ಲವಂಗವಿಲ್ಲದಿದ್ದರೆ, ದಾಲ್ಚಿನ್ನಿ ತುಂಡುಗಳು ಸಹ ಉತ್ತಮ ಆಯ್ಕೆಯಾಗಿದೆ. ಅಂತಹ ವಸ್ತುಗಳನ್ನು ಸಕ್ಕರೆ ಡಬ್ಬಿಯಲ್ಲಿ ಸಂಗ್ರಹಿಸುವಾಗ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಸಕ್ಕರೆಗೆ ಏನೂ ಬರದಂತೆ ಅವುಗಳನ್ನು ಚೀಲದಲ್ಲಿ ಇಡುವುದು ಉತ್ತಮ. ನೀವು ಡಬ್ಬಿಯನ್ನು ತೆರೆದಿಟ್ಟರೆ ಇರುವೆಗಳು ಮತ್ತೆ ಮುತ್ತಿಕೊಳ್ಳುತ್ತವೆ. ಹಾಗಾಗಿ ಯಾವಾಗಲೂ ಬಿಗಿಯಾಗಿ ಮುಚ್ಚಿಡಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
