Headlines

ಸಚಿವರ ಬರ್ತ್​​ಡೇ ಸ್ಪೆಷಲ್: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ – Kannada News | Minister Madhu Bangarappa Students’ First Ever Flight, Wins Hearts for His Birthday

ಶಿವಮೊಗ್ಗ, (ಮಾರ್ಚ್ 02): ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಇಂದು (ಮಾರ್ಚ್ 02) ಜನ್ಮದಿನದ ಪ್ರಯುಕ್ತ ಸೊರಬ ತಾಲೂಕಿನ 30ಕ್ಕೂ ಅಧಿಕ ಪೌರ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಲಭಿಸಿದೆ. ಸೊರಬ ಹಾಗೂ ಆನವಟ್ಟಿಯ ಪೌರ ಕಾರ್ಮಿಕರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡಿಸಲಾಗಿದೆ.‌ ಪೌರ ಕಾರ್ಮಿಕರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಇನ್ನು ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ಪೋಷಕರೊಂದಿಗೆ ವಿಮಾನಯಾನ ಭಾಗ್ಯ ಸಿಕ್ಕಿದೆ. ಇಂದು (ಮಾರ್ಚ್ 02) ಮೊದಲ ಬಾರಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು, ಸಚಿವರ ಜೊತೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿ ಫುಲ್ ಖುಷ್ ಆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *