ಸಚಿವ ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ – Kannada News | Yathindra Siddaramaiah Likely to Become Karnataka Legislative Council Leader

ಬೆಂಗಳೂರು, (ಆಗಸ್ಟ್​​ 09): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಸಚಿವ ಯತೀಂದ್ರ ಅವರಿಗೆ ಮತ್ತೊಂದು ಪ್ರಮುಖ ಜವಾಬ್ದಾರಿ ಸಿಗುವುದು ಬಹುತೇಕ ಖಚಿತವಾಗಿದೆ. ಖಾಲಿ ಇರುವ ವಿಧಾನ ಪರಿಷತ್​​ ಸಭಾ ನಾಯಕನ ಹೊಣೆ ಯತೀಂದ್ರ ಸಿದ್ದರಾಮಯ್ಯನವರ ಹೆಗಲಿಗೆ ಬೀಳುವ ಸಾಧ್ಯತೆ ಇದ್ದು, ಪರಿಷತ್​​ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿರೋದೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎನ್​​​ಎಸ್ ಬೋಸರಾಜ್ ಅವರು ಸಚಿವರಾಗಿದ್ದರು. ಜೊತೆಗೆ ವಿಧಾನಪರಿಷತ್ ಸಭಾನಾಯಕರಾಗಿದ್ದರು. ಅದರಂತೆ ಇದೀಗ ಯತೀಂದ್ರ ಸಿದ್ದರಾಮಯ್ಯನವರಿಗೆ ಸಭಾನಾಯಕ ಸ್ಥಾನ ಒಲಿಯಲಿದೆ.

ಇನ್ನು ಆಗಸ್ಟ್ 13 ರಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಪರಿಷತ್ ನಲ್ಲಿ ಆಡಳಿತ ಪಕ್ಷವನ್ನು ಯತೀಂದ್ರ ಮುನ್ನಡೆಸಲಿದ್ದಾರೆ. ಇನ್ನು ಯತೀಂದ್ರಗೆ ಸಭಾ ನಾಯಕ ಸ್ಥಾನದ ಮೂಲಕ ಸಿದ್ದರಾಮಯ್ಯ ಮುನಿಸು ಕೂಡ ತಣಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *