ಸಣ್ಣದೊಂದು ವಿವಾದ, ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪತಿ, ಆಕೆ ಸ್ಥಳದಲ್ಲೇ ಸಾವು – Kannada News | Thane: Husband Kills Wife with TV During Argument in Kalyan; Arrested for Murder

ಥಾಣೆ, ಮೇ 25: ಗಂಡ-ಹೆಂಡತಿ ನಡುವಿನ ಸಣ್ಣದೊಂದು ವಿವಾದ ಕೊಲೆ(Murder)ಯಲ್ಲಿ ಅಂತ್ಯಗೊಂಡಿದೆ. ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪರಿಣಾಮ ಆಕೆ ಕೂಡಲೇ ಸಾವನ್ನಪ್ಪಿದ್ದಾಳೆ. ಕೊಲೆ ಆರೋಪದ ಮೇಲೆ ಪತಿಯನ್ನು ಬಂಧಿಸಲಾಗಿದೆ. ಆತನಿಗೆ 21 ವರ್ಷ ವಯಸ್ಸು, ಆಕೆಗಿನ್ನು 20 ವರ್ಷ ವಯಸ್ಸಾಗಿತ್ತು.

ಥಾಣೆ ಜಿಲ್ಲೆಯ ಕಲ್ಯಾಣ್ ತಾಲೂಕಿನ ಬಲ್ಯಾನಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಕಲ್ಯಾಣ್ ತಾಲೂಕು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುಖೇಶ್ ಧಾಗೆ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಸತೀಶ್ ಕಲುರಾಮ್ ವಾಘೆ ಅಲಿಯಾಸ್ ಗುಡ್ಡು (21) ಎಂದು ಗುರುತಿಸಲಾಗಿದೆ. ಈತ ತನ್ನ 20 ವರ್ಷದ ಪತ್ನಿ ಸಾರಿಕಾಳ ನಡತೆಯ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದಂಪತಿ ಆಗಾಗ ಜಗಳವಾಡುತ್ತಿದ್ದರು.

ಶನಿವಾರ ತಡರಾತ್ರಿಯೂ ಇಬ್ಬರ ನಡುವೆ ಭಾರಿ ಜಗಳ ನಡೆದಿದೆ. ಈ ವೇಳೆ ತೀವ್ರ ಕೋಪಗೊಂಡ ಆರೋಪಿ ಸತೀಶ್, ಮನೆಯಲ್ಲಿದ್ದ ಟೆಲಿವಿಷನ್ ಸೆಟ್ ಅನ್ನು ಪತ್ನಿ ಸಾರಿಕಾಳ ತಲೆಯ ಮೇಲೆ ಬಲವಾಗಿ ಒಡೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ನೀರಿನ ಪಾತ್ರೆಯಿಂದಲೂ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾರಿಕಾ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮತ್ತಷ್ಟು ಓದಿ: ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಲ್ಯಾಣ್ ತಾಲೂಕು ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಪತಿ ಸತೀಶ್ ವಾಘೆನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *