ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಮೂರೇ ದಿನಕ್ಕೆ 40+ ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಈ ಸಿನಿಮಾ ಗೆದ್ದ ಖುಷಿಯಲ್ಲಿ ಸಮಂತಾ ಮಾತನಾಡುವಾಗ ಎಲ್ಲರ ಗಮನ ಅವರ ಹೊಟ್ಟೆಯ ಮೇಲೆ ನೆಟ್ಟಿತ್ತು. ಅವರು ತಾಯಿ ಆಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಈ ಊಹೆ ಸರಿಯಾಗಿದೆ. ಸಮಂತಾ ತಾಯಿ ಆಗುತ್ತಿರುವ ವಿಷಯವನ್ನು ಅವರ ಆಪ್ತರೇ ಖಚಿತಪಡಿಸಿದ್ದಾರೆ.
ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ರಾಜ್ ನಿಧಿಮೋರು ಅವರನ್ನು ಸಮಂತಾ ವಿವಾಹ ಆದರು. ಕಳೆದ ವರ್ಷ ಡಿಸೆಂಬರ್ 1ರಂದು ಈ ವಿವಾಹ ನೆರವೇರಿತು. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಯಲ್ಲಿ ಭಾಗಿ ಆದರು. ಈಗ ಸಮಂತಾ ಅವರು ತಾಯಿ ಆಗುತ್ತಿದ್ದಾರೆ. ಸಮಂತಾ ಆಪ್ತ ಗೆಳತಿ ಹಾಗೂ ‘ಮಾ ಇಂಟಿ ಬಂಗಾರಂ’ ನಿರ್ದೇಶಕ ನಂದಿನಿ ರೆಡ್ಡಿ ಅವರೇ ಈ ವಿಷಯ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ನಟಿ ಸಮಂತಾ ಕಟೌಟ್ಗೆ ಅದ್ಧೂರಿ ಹಾರ, ಹಾಲಿನಭಿಷೇಕ: ವಿಡಿಯೋ
‘ಸಿನೇಮಾ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಂದಿನಿ, ‘ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಮಾ ಇಂಟಿ ಬಂಗಾರಂ ಯುಶಸ್ಸು ಕಂಡಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಬಹುತೇಕ ಅಧಿಕೃತವಾದಂತೆ ಆಗಿದೆ.
‘ಮಾ ಇಂಟಿ ಬಂಗಾರಂ’ ಸಿನಿಮಾ ತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಇದರಲ್ಲಿ ಅವರು ಸ್ವಲ್ಪ ಟೈಟ್ ಶರ್ಟ್ ಧರಿಸಿದ್ದರಿಂದ ಹೊಟ್ಟೆ ದೊಡ್ಡದಾಗಿ ಕಾಣುತ್ತಾ ಇತ್ತು. ಆಗಿನಿಂದ ಸಮಂತಾ ಪ್ರೆಗ್ನೆನ್ಸಿ ವಿಷಯ ಹರಿದಾಡಿತ್ತು. ಸಮಂತಾ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಕನ್ನಡದ ದಿಗಂತ್ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಕೆಲವರು ಪಾಸಿಟಿವ್ ಪ್ರತಿಕ್ರಿಯೆ ಹೊರಹಾಕಿದರೆ ಇನ್ನೂ ಕೆಲವರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
