ಸಮಂತಾ 100 ಕೋಟಿ ಕ್ಲಬ್ ಕನಸಿಗೆ ಮಾಜಿ ಭಾವ ಅಖಿಲ್ ಅಕ್ಕಿನೇನಿ ಅಡ್ಡಿ? ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ – Kannada News | Samantha Maa Inti Bangaram Chases 100 Cr Will Akhil Lenin Be a Roadblock

ಸಮಂತಾ (Samantha) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ದೀರ್ಘ ಬ್ರೇಕ್ ಬಳಿಕ ಸಮಂತಾ ಬಂದರೂ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ. ಇದು ಅವರ ಸ್ಟಾರ್​​ಡಂಗೆ ಸಾಕ್ಷಿ. ಈ ಫ್ಯಾಮಿಲಿ ಡ್ರಾಮಾ ಸಿನಿಮಾ ಇದುವರೆಗೆ ಭರ್ಜರಿ 95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಕೇವಲ 5 ಕೋಟಿ ಗಳಿಸಿದರೆ ಸಿನಿಮಾ 100 ಕೋಟಿಯ ಕ್ಲಬ್ ಸೇರಲಿದೆ. ಆದರೆ, ಮಾಜಿ ಭಾವನೇ ಅವರಿಗೆ ವಿಲನ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ತೆಲುಗು ಚಿತ್ರರಂಗದಲ್ಲಿ ಈವರೆಗೆ ಯಾವುದೇ ಮಹಿಳಾ ಪ್ರಧಾನ ಸಿನಿಮಾ 100 ಕೋಟಿ ರೂಪಾಯಿ ಗಳಿಸಿಲ್ಲ. ಒಂದು ವೇಳೆ ‘ಮಾ ಇಂಟಿ ಬಂಗಾರಂ’ ಈ ಸಾಧನೆ ಮಾಡಿದರೆ ಸಮಂತಾ ಹೊಸ ಇತಿಹಾಸ ಬರೆಯಲಿದ್ದಾರೆ. ಇದೇ ಖುಷಿಯಲ್ಲಿ ದೊಡ್ಡ ಸಕ್ಸಸ್ ಪಾರ್ಟಿ ಮಾಡಲು ಸಮಂತಾ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಈ ಸಂಭ್ರಮಕ್ಕೆ ಈಗ ದೊಡ್ಡ ಅಡ್ಡಿಯೊಂದು ಎದುರಾಗಿದೆ.

ಅಖಿಲ್ ಅಕ್ಕಿನೇನಿ ‘ಲೆನಿನ್’ ಎಂಟ್ರಿ:

ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಅವರ ತಮ್ಮ ಅಖಿಲ್ ಅಕ್ಕಿನೇನಿ. ಅವರ ನಟನೆಯ ‘ಲೆನಿನ್’ ಸಿನಿಮಾ ಇಂದು (ಜುಲೈ 10) ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳಲ್ಲಿ ಈಗ ‘ಮಾ ಇಂಟಿ ಬಂಗಾರಂ’ ಚಿತ್ರದ ಕಲೆಕ್ಷನ್ ಕೊಂಚ ನಿಧಾನವಾಗಿದೆ. ಇಂತಹ ಸಮಯದಲ್ಲಿ ಅಖಿಲ್ ಅವರ ‘ಲೆನಿನ್’ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕರೆ ಸಮಂತಾ ಚಿತ್ರದ ಕಲೆಕ್ಷನ್ ಮತ್ತಷ್ಟು ಕುಸಿಯಲಿದೆ.

ಕೆಲವು ದಿನಗಳ ಹಿಂದಷ್ಟೇ ಅಖಿಲ್ ಅಕ್ಕಿನೇನಿ ಅವರು ಸಮಂತಾ ಸಿನಿಮಾವನ್ನು ಹೊಗಳಿದ್ದರು. ‘ಮಾ ಇಂಟಿ ಬಂಗಾರಂ’ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದ್ದರಿಂದ ಸಿನಿಮಾ ಗೆದ್ದಿದೆ ಎಂದಿದ್ದರು. ಆದರೆ ಈಗ ಅದೇ ಅಖಿಲ್ ಸಿನಿಮಾ ಸಮಂತಾ ಅವರ 100 ಕೋಟಿ ಕನಸಿಗೆ ಅಡ್ಡಿಯಾಗಿ ನಿಂತಿದೆ.

ಇದನ್ನೂ ಓದಿ: ದಾಖಲೆ ಬರೆದ ನಟಿ ಸಮಂತಾ ಋತ್ ಪ್ರಭು, ಭರ್ಜರಿ ಕಮ್​​ಬ್ಯಾಕ್

ಒಂದೊಮ್ಮೆ ‘ಲೆನಿನ್’ ಚಿತ್ರಕ್ಕೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾದರೆ, ಸಮಂತಾ ಅವರ ಸಿನಿಮಾ 100 ಕೋಟಿ ದಾಟುವುದು ಕಷ್ಟವಾಗಬಹುದು. ಮಾಜಿ ಭಾವನ ಸಿನಿಮಾ ಸಮಂತಾ ಅವರ ದಾಖಲೆಯ ಓಟಕ್ಕೆ ಬ್ರೇಕ್ ಹಾಕುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *