ಸಮಾಧಿಗಳ ನಡುವೆ ಕುಳಿತು ಇಲ್ಲಿನ ಸ್ಪೆಷಲ್‌ ಮಸಾಲ ಟೀ ರುಚಿ ಸವಿಯುವ ಗ್ರಾಹಕರು; ಇದು ಲಕ್ಕಿ ರೆಸ್ಟೋರೆಂಟ್ ವಿಶೇಷತೆ – Kannada News | Ahmedabad: Lucky Restaurant in Ahmedabad’s Lal Darwaza, situated amidst 26 graves

ಲಕ್ಕಿ ರೆಸ್ಟೋರೆಂಟ್ Image Credit source: Ahmedabad Insider

ಯಾರಾದ್ರೂ ನಿಮ್ಗೆ ಸಮಾಧಿಗಳ ನಡುವೆ ಕುಳಿತು ಚಹಾ ಕುಡಿಯುವ ಚಾಲೆಂಜ್ ಕೊಟ್ರೆ ನಿಮ್ಮರಿಯಾಕ್ಷನ್‌  ಹೇಗಿರುತ್ತದೆ ಒಮ್ಮೆ ಊಹಿಸಿ. ಹಾಗೇನಾದ್ರೂ ಚಹಾ ಬಿಡಿ ಗಂಟಲಲ್ಲಿ ಒಂದು ಗುಟುಕು ನೀರು ಕೂಡ ಗಂಟಲಲ್ಲಿ ಇಳಿಯಲ್ಲ. ಆದರೆ ನೀವೇನಾದ್ರೂ ಗುಜರಾತಿನ ಅಹಮದಾಬಾದ್‌ನ ಲಾಲ್ ದರ್ವಾಜಾದಲ್ಲಿರುವ (Ahmedabad’s Lal Darwaza) ಲಕ್ಕಿ ರೆಸ್ಟೋರೆಂಟ್ ಗೆ (lucky restaurant) ಹೋದ್ರೆ ಸಮಾಧಿಗಳ ನಡುವೆ ಕುಳಿತು ಉಪಹಾರ ಸೇವಿಸಬೇಕು. ಈ ರೆಸ್ಟೋರೆಂಟ್ ಗೆ 16 ನೇ ಶತಮಾನದ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳಿವೆ. ಆದರೆ ಈ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇವತ್ತಿಗೂ ಕಡಿಮೆಯಾಗಿಲ್ಲ.

ಈ ರೆಸ್ಟೋರೆಂಟ್ ನಿರ್ಮಾಣವಾದದ್ದು ಯಾವಾಗ?

1950ರಲ್ಲಿ ಕೆ.ಎಚ್. ಮೊಹಮ್ಮದ್ ಭಾಯ್ ಎಂಬುವವರು ಸಣ್ಣ ಚಹಾ ಅಂಗಡಿಯಾಗಿ ಆರಂಭಿಸಿದ್ದರು. ಈ ಸಣ್ಣ ಚಹಾ ಅಂಗಡಿ ವಿಸ್ತರಣೆ ಮಾಡುವಾಗ ಅಲ್ಲಿ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳು ಇರುವುದು ತಿಳಿಯಿತು. ಆದರೆ, ಈ ಸ್ಮಶಾನವನ್ನು ತೆರವುಗೊಳಿಸದೇ, ಸಮಾಧಿಗಳ ನಡುವೆಯೇ ರೆಸ್ಟೋರೆಂಟ್ ನಿರ್ಮಾಣ ಮಾಡಲಾಯಿತು. ಈ ಸಮಾಧಿಯ ಸುತ್ತಲೂ ಕಬ್ಬಿಣದ ಸರಪಳಿಗಳು ಅಥವಾ ಗ್ರಿಲ್‌ಗಳನ್ನು ಅಳವಡಿಸಲಾಗಿದೆ.
ಈ ಹಿಂದೆ ಪ್ರಸಿದ್ಧ ವರ್ಣಚಿತ್ರಕಾರ ಮಕ್ಬುಲ್ ಫಿದಾ ಹುಸೇನ್ ಈ ಹೋಟೆಲ್‌ನ ಇಲ್ಲಿನ ಗ್ರಾಹಕರಾಗಿದ್ದರು. ಇಲ್ಲೇ ಕುಳಿತು ಚಿತ್ರ ಬಿಡಿಸುತ್ತಿದ್ದ ಅವರು ಈ ರೆಸ್ಟೋರೆಂಟ್ ಗೆ ತನ್ನ ಕೈಯಾರೆ ಬಿಡಿಸಿದ ವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರಂತೆ.

ಇದನ್ನೂ ಓದಿ: ಬೈಕ್ ಬದಲು ಕುದುರೆ ಏರಿ ಆಹಾರ ತಲುಪಿಸಲು ಹೊರಟ ಡೆಲಿವರಿ ಬಾಯ್

ಈ ರೆಸ್ಟೋರೆಂಟ್ ಯಾವುದಕ್ಕೆ ಫೇಮಸ್?

ಇಲ್ಲಿನ ಹೋಟೆಲ್ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಪ್ರತಿ ಸಮಾಧಿಗೂ ಹೂವುಗಳನ್ನು ಇಟ್ಟು ಗೌರವ ಸಲ್ಲಿಸುತ್ತಾರೆ. ನೀವೇನಾದ್ರೂ ಈ ರೆಸ್ಟೋರೆಂಟ್ ಗೆ ಹೋದ್ರೆ ಸಮಾಧಿಗಳ ನಡುವೆ ಕುಳಿತು ಸ್ಪೆಷಲ್ ಮಸಾಲಾ ಟೀ ಹಾಗೂ ಮಸ್ಕಾ ಬನ್ ತಿನ್ನುವುದು ಸವಿಯಬಹುದು. ಇದರ ಜತೆಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳು ಇಲ್ಲಿ ಸಿಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:14 pm, Wed, 5 August 26

Source link

Leave a Reply

Your email address will not be published. Required fields are marked *