ಬೆಂಗಳೂರು, (ಜೂನ್ 25): ಡಿಕೆ ಶಿವಕುಮಾರ್ (DK Shivakumar) ಸಂಪುಟದ ಸಚಿವರಿಗೆ ಇಂದು (ಜೂನ್ 25) ಸರ್ಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರ ಜೊತೆಗೆ ಮೂರು ವರ್ಷಗಳ ಬಳಿಕ ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಅವರಿಗೂ ಸರ್ಕಾರಿ ನಿವಾಸವನ್ನು ನೀಡಲಾಗಿದೆ. ಆದ್ರೆ, ಅಶೋಕ್ ಬಯಸಿದ್ದು ಮಾತ್ರ ಸಿಕಿಲ್ಲ. ಹೌದು…ಆರ್.ಅಶೋಕ್ ಕೇಳಿದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸವನ್ನು ಆರೋಗ್ಯ ಸಚಿವ ಯುಟಿ ಖಾದರ್ ಅವರಿಗೆ ನೀಡಲಾಗಿದೆ. ಇದರಿಂದ ಅಶೋಕ್ ಅವರಿಗೆ ಮೂರು ವರ್ಷಗಳ ನಂತರ ನಿವಾಸ ನೀಡಿದರೂ ಸಹ ಅವರು ಬಯಸಿದ್ದು ಮಾತ್ರ ಕೊಟ್ಟಿಲ್ಲ. ಬದಲಾಗಿ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ಅಶೋಕ್ ಗೆ ನೀಡಲಾಗಿದೆ.
ಯಾರ್ಯಾರಿಗೆ ಯಾವ್ಯಾವ ನಿವಾಸ?
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೇಳಿದ್ದ ಸರ್ಕಾರಿ ನಿವಾಸ ಆರೋಗ್ಯ ಸಚಿವ ಯು.ಟಿ. ಖಾದರ್ ಗೆ ಹಂಚಿಕೆ ಮಾಡಲಾಗಿದೆ. ಇನ್ನು ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ಇದೀಗ ಅಶೋಕ್ ಅವರಿಗೆ ನೀಡಲಾಗಿದೆ. ಇನ್ನು M.B.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ನೀಡಲಾಗಿದ್ದ ಮನೆಯನ್ನೇ ಕೇಳಿದ್ದರು. ಅದರಂತೆ ಇದೀಗ ಅವೇ ನಿವಾಸಗಳನ್ನು ಅವರಿಗೆ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್
3 ವರ್ಷದ ನಂತ್ರ ಕೊಟ್ಟರೂ ಅಶೋಕ್ ಬಯಸಿದ್ದು ಸಿಗಲೇ ಇಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದರೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ ಇನ್ನುವರೆಗೂ ಅಧಿಕೃತ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿರಲಿಲ್ಲ. ಹೀಗಾಗಿ ಅಶೋಕ್ ಅವರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ಮನೆ ಅಶೋಕ್ಗೆ ಹಂಚಿಕೆ ಮಾಡಲಾಗಿದೆ. ಆದ್ರೆ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ ಇದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸ, M.B.ಪಾಟೀಲ್ ಅಥವಾ ಪ್ರಿಯಾಂಕ್ ಖರ್ಗೆ ಅವರಿದ್ದ ನಿವಾಸ ಬೇಕೆಂದು ಮನವಿ ಮಾಡಿದ್ದರು. ಆದ್ರೆ, ಅಶೋಕ್ ಕೇಳಿದ್ದ ಯಾವುದೇ ನಿವಾಸವನ್ನು ನೀಡಿಲ್ಲ. ಬದಲಾಗಿ ಈ ಹಿಂದೆ ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ನೀಡಲಾಗಿದೆ. ಆದ್ರೆ, ಇದನ್ನು ಅಶೋಕ್ ಸ್ವೀಕಾರ ಮಾಡುತ್ತಾರೋ ಇಲ್ವಾ ಎನ್ನುವುದನ್ನು ಕಾದುನೋಡಬೇಕಿದೆ.
ವಿಧಾನಸಭೆ, ಪರಿಷತ್ ವಿಪಕ್ಷ ನಾಯಕರಿಗೆ ಸಿಕ್ಕಿರಲಿಲ್ಲ ಸರ್ಕಾರಿ ಗೃಹ
ಹೌದು.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಆದ್ರೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸರ್ಕಾರಿ ನಿವಾಸ ಇನ್ನೂ ಸಿಕ್ಕಿರಲಿಲ್ಲ. ಈ ಬಗ್ಗೆ ಐದಾರು ಬಾರಿ ಪತ್ರವನ್ನು ಬರೆದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಸಂಬಂಧ ಉಭಯ ನಾಯಕರು ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸರ್ಕಾರ, ಕೊನೆಗೂ ಛಲವಾದಿ ನಾರಾಯಣಸ್ವಾಮಿ ಹಾಗೂ ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿದೆ.
ಅಶೋಕ್ ಬಯಸಿದ್ದ ನಿವಾಸಗಳಾವುವು?
ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ನಿವಾಸಗಳಿಗೆ ಆರ್.ಅಶೋಕ್ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದರು. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಂಚಿಕೆಯಾಗಿತ್ತು. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದರು. ಸದ್ಯ ರೇಸ್ ವ್ಯೂ ಕಾಟೇಜ್ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್ ಗೆ ಹಂಚಿಕೆ ಮಾಡಿದ್ದರೆ, ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿತ್ತು. ಹೀಗಾಗಿ ಅಶೋಕ್ ಅವರಿಗೆ ಯಾವುದೇ ನಿವಾಸ ಸಿಕ್ಕಿರಲಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 8:37 pm, Thu, 25 June 26
