‘ಜೋಗಿ’ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗ ಅರುಣ್ ರಾಮ್ ಪ್ರಸಾದ್ ‘ಘಾರ್ಗಾ’ (Gharga) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರುಣ್ ಅವರೇ ಹೀರೋ. ಇದೇ ಸಿನಿಮಾದಲ್ಲಿ ಸಾಯಿ ಕುಮಾರ್, ಅರುಣ್ ಸಾಗರ್ ಮುಂತಾದ ಹಿರಿಯ ಕಲಾವಿದರು ಸಹ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಸಾಯಿ ಕುಮಾರ್ (Sai Kumar) ಅವರ ಜೊತೆ ನಟಿಸುವಾಗ ಏನಾಯಿತು ಎಂಬುದಕ್ಕೆ ಅರುಣ್ ರಾಮ್ ಪ್ರಸಾದ್ ಅವರು ವಿವರಿಸಿದ್ದಾರೆ. ‘ಮೊದಲ ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಿದ್ದು ಇನ್ನೂ ನನಗೆ ಚೆನ್ನಾಗಿ ನೆನಪಿದೆ. ರಿಹರ್ಸಲ್ ಮಾಡಿದ್ದೆವು. ಹಾಗಾಗಿ ಕಾನ್ಫಿಡೆನ್ಸ್ ಇತ್ತು. ಆದರೆ ಮೊದಲ ಶಾಟ್ನಲ್ಲಿ ಅವರು ನನ್ನನ್ನು ನೋಡಿದರು. ಆಗ ನನಗೆ ಎಲ್ಲವೂ ಮರೆತು ಹೋಯಿತು. ಆಮೇಲೆ ಅವರು ಕ್ಯಾರವಾನ್ಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು. ಪ್ರತಿ ದಿನ ಅವರು ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು. ಅದರಿಂದ ಅವರ ಜೊತೆ ನಟಿಸುವುದು ಸುಲಭ ಆಯಿತು’ ಎಂದು ಅರುಣ್ ರಾಮ್ ಪ್ರಸಾದ್ (Arun Ram Prasad) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
