ಸಾಯಿ ಪಲ್ಲವಿ ಜೊತೆ ಆಮಿರ್ ಖಾನ್ ಮಗನ ಒಂದು ದಿನದ ಪ್ರೀತಿ; ಏನಿದು ಕಥೆ? – Kannada News | Aamir Khan son Junaid Khan Sai Pallavi Ek Din movie Trailer release

ಬಾಲಿವುಡ್ ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ (Junaid Khan) ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಜೊತೆ ಜುನೈದ್ ಖಾನ್ ಅಭಿನಯದ ‘ಏಕ್ ದಿನ್’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾದ ಟ್ರೇಲರ್ ಗುರುವಾರ (ಏಪ್ರಿಲ್ 16) ಬಿಡುಗಡೆಯಾಗಿದೆ. ಸುನಿಲ್ ಪಾಂಡೆ ನಿರ್ದೇಶನದ ಈ ಚಿತ್ರವು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿದೆ. ‘ಏಕ್ ದಿನ್’ (Ek Din) ಸಿನಿಮಾದ ಕಥೆ ಏನು ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

‘ಏಕ್ ದಿನ್’ ಚಿತ್ರದ ಮೂಲಕ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ಬಿಡುಗಡೆಯಾಗಿರುವ 2 ನಿಮಿಷ 54 ಸೆಕೆಂಡುಗಳ ಟ್ರೇಲರ್​ನಲ್ಲಿ ಒಂದು ಸುಂದರವಾದ ಲವ್ ಸ್ಟೋರಿ ಕಾಣಿಸಿದೆ. ಹೀರೋ ಮತ್ತು ಹೀರೋಯಿನ್ ನಡುವೆ ನಡೆಯುವ ಒಂದೇ ದಿನದ ಪ್ರೀತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ.

ಟ್ರೇಲರ್‌ನಲ್ಲಿ ಜುನೈದ್ ಖಾನ್ ಒಬ್ಬ ನಾಚಿಕೆ ಸ್ವಭಾವದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಒಂದೇ ಆಫೀಸ್​ನಲ್ಲಿ ಕೆಲಸ ಮಾಡುವ ಸಾಯಿ ಪಲ್ಲವಿ ಮೇಲೆ ಅವರಿಗೆ ಪ್ರೀತಿ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸಲು ಧೈರ್ಯ ಸಾಲದೆ ಒದ್ದಾಡುತ್ತಿರುತ್ತಾರೆ. ಆದರೆ, ಇಡೀ ಆಫೀಸ್​ನವರು ಜಪಾನ್‌ ಪ್ರವಾಸಕ್ಕೆ ತೆರಳಿದಾಗ ನಡೆಯುವ ಒಂದು ಅಪಘಾತದಿಂದ ಕಥೆಗೆ ರೋಚಕ ತಿರುವು ಬರುತ್ತದೆ.

‘ಏಕ್ ದಿನ್’ ಚಿತ್ರದ ಟ್ರೇಲರ್‌:

ಅಪಘಾತದ ನಂತರ ಸಾಯಿ ಪಲ್ಲವಿ ಪಾತ್ರಕ್ಕೆ ಒಂದು ದಿನದ ಮಟ್ಟಿಗೆ ಹಳೆಯದೆಲ್ಲ ಮರೆತು ಹೋಗುತ್ತದೆ. ಆ ಒಂದೇ ದಿನದಲ್ಲಿ ಜುನೈದ್ ಖಾನ್ ಪಾತ್ರದ ಜೊತೆ ಲವ್ ಆಗುತ್ತದೆ. ಆ ಲವ್ ಸ್ಟೋರಿಗೆ ಒಂದು ದಿನ ಮಾತ್ರ ಆಯಸ್ಸು. ಹಾಗಾದರೆ ಮುಂದೇನಾಗುತ್ತದೆ? ಮೇ 1ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಅಂದೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

ಆಮಿರ್ ಖಾನ್, ಮನ್ಸೂರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ರಾಮ್ ಸಂಪತ್ ಅವರು ಸಂಗೀತ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *