ಸಿಇಟಿ 2026: ಸೀಟ್​​ ಹಂಚಿಕೆ ಹೇಗೆ ನಡೆಯುತ್ತೆ? ಇಲ್ಲಿದೆ ಮಹತ್ವದ ಮಾಹಿತಿ – Kannada News | CET 2026: How Will Seat Allotment Be Conducted? Here’s Important Information

ಬೆಂಗಳೂರು, ಜೂನ್​​ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ 2026ರ ಆಪ್ಷನ್ ಎಂಟ್ರಿ ಮತ್ತು ಕೋರ್ಸ್ ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಎಂಜಿನಿಯರಿಂಗ್ ಸೀಟುಗಳಲ್ಲಿ ಶೇ.45 ಕೆಇಎ ಮೂಲಕ ಹಂಚಿಕೆಯಾಗಲಿದ್ದು, ಕಡಿಮೆ ಶುಲ್ಕದಲ್ಲಿ ಸೀಟು ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಪೋಷಕರು ನೇರ ಪ್ರವೇಶ ಅಥವಾ ಖಾಸಗಿ ಕಾಲೇಜುಗಳ ಆಮಿಷಗಳಿಗೆ ಬಲಿಯಾಗದೆ, ಮೆರಿಟ್ ಆಧರಿಸಿ ಕೆಇಎ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ. ಕಳೆದ ವರ್ಷದ ರ್ಯಾಂಕ್​​ ವಿವರಗಳನ್ನು ಆಧರಿಸಿ ಹೋಮ್‌ವರ್ಕ್ ಮಾಡಿಕೊಂಡು, ಪ್ರಾಶಸ್ತ್ಯದ ಆಧಾರದ ಮೇಲೆ ಆಪ್ಷನ್‌ಗಳನ್ನು ನಮೂದಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *