ಸಿಎಂ ವಿಜಯ್‌ 52ನೇ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಮೌನ: ಶುಭಾಶಯದ ಸುಳಿವೇ ಇಲ್ಲ – Kannada News | TN Chief Minister Vijay Birthday celebrations Fans wait for Trisha Krishnan wish

ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್ (CM Vijay) ಇಂದು (ಜೂನ್ 22) 52ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟನೆಯಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರಿಗೆ ದೇಶದಾದ್ಯಂತ ರಾಜಕಾರಣಿಗಳು, ಚಿತ್ರರಂಗದ ಪ್ರಮುಖರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದಾರೆ. ಆದರೆ ಅವರ ಆಪ್ತ ಗೆಳತಿ ತ್ರಿಶಾ ಕೃಷ್ಣನ್ (Trisha Krishnan) ಮಾತ್ರ ಮೌನ ತಾಳಿದ್ದಾರೆ!

ಹಿರಿಯ ನಟ ಕಮಲ್ ಹಾಸನ್ ಅವರು ಟ್ವೀಟ್ ಮಾಡಿ, ‘ಕೋಟಿ ಕೋಟಿ ಹೃದಯಗಳನ್ನು ಗೆದ್ದಿರುವ ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಹಾಗೂ ನನ್ನ ಪ್ರೀತಿಯ ಕಿರಿಯ ಸೋದರ ವಿಜಯ್ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕೂಡ ವಿಶ್ ಮಾಡಿದ್ದಾರೆ.

ಖುಷ್ಬೂ ಅವರು ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡು, ‘ನನ್ನ ಸಹೋದರ, ತಮಿಳುನಾಡಿನ ಸಿಎಂ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆರೋಗ್ಯ, ಆಯುಷ್ಯ ನೀಡಿ ಆಶೀರ್ವದಿಸಲಿ’ ಎಂದು ಹಾರೈಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ನಟರಾದ ವಿಶಾಲ್ ಮತ್ತು ರಾಘವ ಲಾರೆನ್ಸ್ ಕೂಡ ವಿಜಯ್‌ಗೆ ಶುಭ ಕೋರಿದ್ದಾರೆ. ಈ ಬಾರಿ ವಿಜಯ್ ಸಿಎಂ ಆಗಿರುವುದರಿಂದ ಅವರ ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ ಎಂದು ಸಹೋದ್ಯೋಗಿಗಳು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ಪ್ರತಿ ವರ್ಷ ವಿಜಯ್ ಜನ್ಮದಿನಕ್ಕೆ ಎಲ್ಲರಿಗಿಂತ ಮುಂಚಿತವಾಗಿ ವಿಶೇಷವಾಗಿ ಶುಭ ಕೋರುತ್ತಿದ್ದ ನಟಿ ತ್ರಿಶಾ ಕೃಷ್ಣನ್ ಈ ಬಾರಿ ಇನ್ನು ಯಾವುದೇ ಪೋಸ್ಟ್ ಹಾಕದಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಬರ್ತ್‌ಡೇ ಟ್ರೆಂಡ್ ಆಗುತ್ತಿದ್ದರೆ, ಅಭಿಮಾನಿಗಳು ಮಾತ್ರ ‘ತ್ರಿಶಾ ಅವರ ಶುಭ ಹಾರೈಕೆಯ ಪೋಸ್ಟ್‌ಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ತ್ರಿಶಾ ಅವರ ಹಳೆಯ ಟ್ವೀಟ್‌ಗಳನ್ನು ಮರುಹಂಚಿಕೊಂಡು, ‘ನಿಮ್ಮ ಪೋಸ್ಟ್‌ಗಾಗಿ ಕಾಯುತ್ತಿದ್ದೇವೆ’ ಎಂದು ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *