ಸಿಕ್ಸರ್‌ಗಳ ಸುರಿಮಳೆಗೆ ಕಾರಣವಾಯ್ತು ಶ್ರೇಯಸ್ ಅಯ್ಯರ್ ಅವರ ಆ ಒಂದು ಸವಾಲು! – Kannada News | Shreyas Iyer’s ‘Six Hitting’ Challenge Powers PBKS’ Record Run

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 254 ರನ್​ಗಳು. ಈ 254 ರನ್​ಗಳಲ್ಲಿ ಬರೋಬ್ಬರಿ 21 ಸಿಕ್ಸರ್​ಗಳಿದ್ದವು ಎಂಬುದು ವಿಶೇಷ. ಹೀಗೆ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಸಿಕ್ಸರ್​ ಸುರಿಮಳೆಗೈಯ್ಯಲು ಮುಖ್ಯ ಕಾರಣ ನಾಯಕ ಶ್ರೇಯಸ್ ಅಯ್ಯರ್ ಮುಂದಿಟ್ಟಿರುವ ಒಂದು ಸ್ಪರ್ಧೆ ಎಂದರೆ ನಂಬಲೇಬೇಕು.

ಸಿಕ್ಸರ್ ಸ್ಪರ್ಧೆ:

ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದ ನಂತರ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಆಟಗಾರರಲ್ಲಿ ಉತ್ಸಾಹ ತುಂಬಲು ತಾವು ಒಂದು ವಿಶೇಷ ಸವಾಲನ್ನು ಹೂಡಿರುವುದಾಗಿ ತಿಳಿಸಿದರು. ಈ ಸೀಸನ್‌ನಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸುತ್ತಾರೋ, ಅವರಿಗೆ ತಮ್ಮ ಸ್ವಂತ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಅಯ್ಯರ್ ಭರವಸೆ ನೀಡಿದ್ದಾರೆ. ಈ ಸಣ್ಣ ಸ್ಪರ್ಧೆಯು ಆಟಗಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಅಯ್ಯರ್ ನೀಡಿದ ಈ ಸವಾಲನ್ನು ಸ್ವೀಕರಿಸಿರುವ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಇದೀಗ ಸಿಕ್ಸರ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಲ್ವರು ಬ್ಯಾಟರ್​ಗಳ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಗಳ ನಡುವೆ ಶ್ರೇಯಸ್ ಅಯ್ಯರ್ ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ಅಂದರೆ ಪಂಜಾಬ್ ಕಿಂಗ್ಸ್ ತಂಡದ ಟಾಪ್-4 ಸಿಕ್ಸರ್​ಗಳ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಕೂಡ ಇದ್ದಾರೆ. ಏಪ್ರಿಲ್ 20, 2026ರಂತೆ ಬ್ಯಾಟ್ ಗೆಲ್ಲುವ ರೇಸ್‌ನಲ್ಲಿ ಯಾವ ಆಟಗಾರ ಮುಂಚೂಣಿಯಲ್ಲಿದ್ದಾರೆ ಎಂದು ನೋಡುವುದಾದರೆ…

  • ಪ್ರಿಯಾಂಶ್ ಆರ್ಯ: 20 ಸಿಕ್ಸರ್‌ಗಳು
  • ಶ್ರೇಯಸ್ ಅಯ್ಯರ್: 14 ಸಿಕ್ಸರ್‌ಗಳು
  • ಕೂಪರ್ ಕಾನೋಲಿ: 14 ಸಿಕ್ಸರ್‌ಗಳು
  •  ಪ್ರಭ್‌ಸಿಮ್ರಾನ್ ಸಿಂಗ್: 11 ಸಿಕ್ಸರ್‌ಗಳು

ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ  ಮಾತನಾಡಿದ ಅಯ್ಯರ್, “ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಬದಲು, ಅವರನ್ನು ಮುಕ್ತವಾಗಿ ಆಡಲು ಬಿಟ್ಟಾಗ ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಾರೆ. ಮೈದಾನದಲ್ಲಿ ತಮ್ಮನ್ನು ತಾವು ಎಕ್ಸ್‌ಪ್ರೆಸ್ ಮಾಡಲು ಅವರಿಗೆ ಸ್ವಾತಂತ್ರ್ಯ ನೀಡಿದ್ದೇನೆ. ಈ ಸ್ವಾತಂತ್ರ್ಯದಿಂದಾಗಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾನ ಕಡೆಗಣಿಸಿ ಪಂದ್ಯ ಸೋತ ರಾಜಸ್ಥಾನ್ ರಾಯಲ್ಸ್

ಸದ್ಯ 6 ಪಂದ್ಯಗಳಿಂದ 11 ಅಂಕಗಳನ್ನು ಕಲೆಹಾಕಿರುವ ಪಂಜಾಬ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲದೆ ಈ ಬಾರಿ ಕೂಡ ಪ್ಲೇಆಫ್​ಗೇರುವ ಭರವಸೆಯನ್ನು ಹುಟ್ಟುಹಾಕಿದೆ.

Source link

Leave a Reply

Your email address will not be published. Required fields are marked *