ಬೆಂಗಳೂರು, ಏಪ್ರಿಲ್ 18: ಸಿಎಂ ಯಾವಾಗ ದುರ್ಬಲ ಆಗಿದ್ದಾರೆ. ಯಾವಾಗಲೂ ಗಟ್ಟಿನೇ ಅವರು. ಟಗರು ಟಗರೆ ಅಲ್ವಾ? ಯಾವಾಗ ಗುದ್ದಬೇಕೋ ಗುದ್ದುತ್ತದೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಸಿಎಂ ಅಸಹಾಯಕರು ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳು ಬೆನ್ನೆಲುಬಾಗಿದ್ದಾರೆ. ರಾಜಣ್ಣ ಅವರಿಗೆ ಸಿಎಂ ಮೇಲೆ ಪ್ರೀತಿ ಇದೆಯಲ್ಲ, ಹಾಗಾಗಿ ಅವರು ಜೋರಾಗಿ ಮಾತಾಡಬೇಕು ಅಂತಾರೆ. ಟಗರು ಸುಮ್ ಸುಮ್ಮನೆ ಗುದ್ದ ಬೇಕು ಅಂತಿಲ್ವಲ್ಲ. ಈಗ ಗುರಾಯಿಸುತ್ತಿದೆ. ಯಾವ ಕಾಲಕ್ಕೆ ಏನು ಮಾಡಬೇಕೋ ಮಾಡುತ್ತದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
