ಸಿದ್ದರಾಮಯ್ಯ ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು! ಹೇಳಿದ್ದೇನು ನೋಡಿ – Kannada News | Run Fast or You’ll Miss the Train: Satish Jarkiholi’s Cryptic Remarks on Siddaramaiah Being Sidelined

ಬೆಂಗಳೂರು, ಜೂನ್ 29: ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ನಂತರ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆಯೇ ಅಥವಾ ಅವರು ಸೈಡ್‌ಲೈನ್ ಆಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅವರು, ಪ್ರಸ್ತುತ ರಾಜಕೀಯದ ವೇಗ ಮತ್ತು ನಾಯಕತ್ವದ ಅನಿವಾರ್ಯತೆಗಳನ್ನು ರೈಲಿನ ಉದಾಹರಣೆಯೊಂದಿಗೆ ವಿವರಿಸಿದರು. ‘ಇದು ಅತ್ಯಂತ ವೇಗವಾಗಿ ಓಡುತ್ತಿರುವ ಕಾಲ. ನಾವು ಕೂಡ ಆ ಸ್ಪೀಡ್‌ಗೆ ತಕ್ಕಂತೆ ಓಡಬೇಕು. ಒಂದು ವೇಳೆ ಓಡದಿದ್ದರೆ ಟ್ರೈನ್ ಮಿಸ್ ಆಗುತ್ತದೆ, ರಾಜಕಾರಣ ಅಂದರೆ ಹಾಗೇನೇ’ ಎಂದು ಅವರು ಹೇಳಿದರು.

ಒಮ್ಮೆ ಟ್ರೈನ್ ಮಿಸ್ ಆದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಬೇಕಿದ್ದರೆ ತುಮಕೂರಿಗೋ ಅಥವಾ ಅರಸೀಕೆರೆಗೋ ಯಾವುದಾದರೂ ಗಾಡಿಯಲ್ಲಿ (ವಾಹನದಲ್ಲಿ) ಹೋಗಿಯಾದರೂ ಆ ರೈಲನ್ನು ಹಿಡಿಯಬೇಕು. ಒಂದು ವೇಳೆ ನಾವು ರೈಲು ಹಿಡಿಯದೇ ಇದ್ದರೆ, ಜನರು ನಮ್ಮನ್ನು ಮರೆತುಬಿಡುತ್ತಾರೆ. ಇದು ನಾನು ವೈಯಕ್ತಿಕವಾಗಿ ಹೇಳುತ್ತಿರುವ ಮಾತಲ್ಲ, ಜನರದ್ದೇ ಆದ ಮಾತು ಎಂದು ಸತೀಶ್ ಜಾರಕಿಹೊಳಿ ವಿಶ್ಲೇಷಿಸಿದರು. ಸಿದ್ದರಾಮಯ್ಯ ಅವರು ಮೈಸೂರಲ್ಲೇ ಕೂತು ರಾಜಕಾರಣ ಮಾಡಬಹುದು, ಅದರಲ್ಲಿ ತಪ್ಪಿಲ್ಲ. ಆದರೆ, ಜನರ ಸಂಪರ್ಕ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯ ತನಕ ಮಾತ್ರ ಒಬ್ಬರು ಲೀಡರ್ ಆಗಿ ಉಳಿಯಲು ಸಾಧ್ಯ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *