
ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ (Satish) ಅವರು ನಟ ಸುದೀಪ್ ಮೇಲೆ ನಿರಂತರವಾಗಿ ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಪ್ರಕರಣದಲ್ಲಿ ಸುದೀಪ್ ಪರವಾಗಿ ವಿನಯ್ ಹಾಗೂ ರಜತ್ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಸತೀಶ್ ದೂರು ದಾಖಲು ಮಾಡಿದ್ದಾರೆ. ಹೀಗಿರುವಾಗಲೇ ರಜತ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ತಾವು ಯಾವಾಗಲೂ ಸುದೀಪ್ ಪರ ನಿಲ್ಲೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಜೊತೆಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಹಾಕಿದ್ದಲ್ಲದೆ, ‘ದಾದಾ ಯಾರ್ ಗೊತ್ತಾ’ ಹಾಡನ್ನು ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಬಳಿಕ ಸತೀಶ್ ಅವರನ್ನು ರಜತ್ ಪ್ರಶ್ನೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯನ್ನು ಸಹ ನೀಡಿದ್ದರು. ಅಲ್ಲದೆ, ವಿನಯ್ ಕೂಡ ರಜತ್ ಬೆಂಬಲಕ್ಕೆ ನಿಂತು, ಸತೀಶ್ಗೆ ಎಚ್ಚರಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ರಜತ್ ಹಾಗೂ ವಿನಯ್ ಮೇಲೆ ಕೇಸ್ ಹಾಕಿದ್ದಾರೆ.
ಈ ಬೆನ್ನಲ್ಲೇ ಪೋಸ್ಟ್ ಮಾಡಿರೋ ರಜತ್ ಅವರು, ‘ನಮ್ಮ ಬಾದ್ಶಾ ಕಿಚ್ಚ ಸರ್ ಬಗ್ಗೆ ಮಾತಾಡೋದು ಅಲ್ಲ, ಕೆಟ್ಟದಾಗಿ ಯೋಚನೆ ಮಾಡ್ಬೇಕು ಅಂದರೂನೂ ಈ ಯಮ ಕಿಂಕರರನ ಮೊದಲು ದಾಟಬೇಕು. ವಿ ಲವ್ ಯೂ ಸರ್’ ಎಂದು ಸುದೀಪ್ ಜೊತೆ ಇರೋ ಫೋಟೋನ ವಿನಯ್ ಹಾಗೂ ರಜತ್ ಕೊಲ್ಯಾಬರೇಷನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್
ರಜತ್ ಅವರು ಸುದೀಪ್ ಅಭಿಮಾನಿ. ಬಿಗ್ ಬಾಸ್ಗೆ ಬಂದ ಬಳಿಕ ಸುದೀಪ್ ಅವರ ಜೊತೆ ಒಳ್ಳೆಯ ನಂಟು ಬೆಳೆಯಿತು. ವಿನಯ್ ಹಾಗೂ ರಜತ್ ಮಚ್ಚಿನ ಕೇಸ್ ಅಲ್ಲಿ ಒಳಕ್ಕೆ ಹೋದಾಗ, ಅವರನ್ನು ಬಿಡಿಸಿ ಕರೆದುಕೊಂಡು ಬಂದಿದ್ದು ಸುದೀಪ್ ಎನ್ನಲಾಗಿದೆ. ಈ ವಿಷಯವನ್ನು ರಜತ್ ಅವರು ಅನೇಕ ಬಾರಿ ಹೇಳಿದ್ದರು. ಈ ಕಾರಣದಿಂದ ಸುದೀಪ್ ಬಗ್ಗೆ ಯಾರೋ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಾಗ ಅದನ್ನು ಇವರು ವಿರೋಧಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.