ಮಹಿಳೆಯರಿಗಾಗಿ ‘ಸೂಪರ್ ಮಾಮ್’ ಹೆಸರಿನ ರಿಯಾಲಿಟಿ ಶೋನ ಜೀ ಕನ್ನಡ ವಾಹಿನಿ ತರುತ್ತಿದೆ. ಇದಕ್ಕೆ ಕರ್ನಾಟಕದ ಒಟ್ಟು 18 ಪ್ರಮುಖ ಜಿಲ್ಲೆಗಳಲ್ಲಿ ಈ ಆಡಿಷನ್‌ಗಳು ನಡೆಯಲಿವೆ. ಎಲ್ಲೆಲ್ಲಿ ಆಡಿಷನ್ ನಡೆಯಲಿದೆ ಎಂಬ ವಿವರವನ್ನು ಜೀ ಕನ್ನಡ ವಾಹಿನಿ ನೀಡಿದೆ. ಜುಲೈ 24 ಅಂದರೆ ಇಂದು ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆಡಿಷನ್ ಆಯೋಜಿಸಲಾಗಿದೆ. ಜುಲೈ 25ರಂದು ಮಂಗಳೂರು ಹಾಗೂ ಕೊಪ್ಪಳದ ಭಾಗದಲ್ಲಿ ಆಡಿಷನ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 26 ಕ್ಕೆ ಉಡುಪಿ ಹಾಗೂ ದಾವಣಗೆರೆಯಲ್ಲಿ ಆಡಿಷನ್ ನಡೆಯಲಿದೆ.
ಆಡಿಷನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ತಾಯಂದಿರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ಒಳಗಾಗಿ ನಿಗದಿಪಡಿಸಿದ ಸ್ಥಳಕ್ಕೆ ಭೇಟಿ ನೀಡಬೇಕು. ಆಡಿಷನ್ ನೀಡುವ ಸಮಯದಲ್ಲಿ ಸ್ಪರ್ಧಿಗಳು ತಮ್ಮ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಚ್ಛಿಸುವವರು 9513134434 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
