ಫರಿದಾಬಾದ್, ಫೆಬ್ರವರಿ 7: ಹರಿಯಾಣದ ಫರೀದಾಬಾದ್ನಲ್ಲಿ ನಡೆಯುತ್ತಿದ್ದ ಸೂರಜ್‌ಕುಂಡ್ ಜಾತ್ರೆಯಲ್ಲಿ ದುರಂತ ಸಂಭವಿಸಿದೆ. ಎಲ್ಲ ಜಾತ್ರೆಗಳಲ್ಲೂ ಇರುವಂತೆ ಆ ಜಾತ್ರೆಯಲ್ಲೂ ಜಾಯಿಂಟ್ ವೀಲ್, ಜೋಕಾಲಿ ಮತ್ತಿತರ ಸ್ವಿಂಗ್ಗಳನ್ನು ಹಾಕಲಾಗಿತ್ತು. ಈ ವೇಳೆ ಸುನಾಮಿ ಸ್ವಿಂಗ್ ತುಂಡಾಗಿ ಬಿದ್ದಿದೆ. ಅದರಲ್ಲಿ ಕುಳಿತಿದ್ದವರು ಕೆಳಗೆ ಬೀಳಲಾರಂಭಿಸಿದರು. ಜಾತ್ರೆಯಲ್ಲಿ ವಿಪರೀತ ಜನ ಸೇರಿದ್ದರಿಂದ ಏನಾಯಿತು ಎಂದು ಅಲ್ಲಿದ್ದವರಿಗೆ ಗೊತ್ತಾಗುವಷ್ಟರಲ್ಲಿ ಮೇಲಿನಿಂದ ಬಿದ್ದು ಪೊಲೀಸ್ ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಉಯ್ಯಾಲೆಯಲ್ಲಿ 18 ಜನರಿದ್ದರು. ಈ ದುರಂತಕ್ಕೆ ಹರಿಯಾಣ ಸಿಎಂ ದುಃಖ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
