ಸೋನು ಶ್ರೀನಿವಾಸ್ ಗೌಡ ಅವರು ಈಗ ನಟಿಯಾಗಿ ಬಡ್ತಿ ಪಡೆದಿದ್ದಾರೆ. ಅವರಿಗೆ ಓರ್ವ ಬಾಯ್ಫ್ರೆಂಡ್ ಇದ್ದ. ಅಪಘಾತದಲ್ಲಿ ಆತ ಮೃತಪಟ್ಟ. ಈ ವೇಳೆ ಸೋನು ಸಾಕಷ್ಟು ನೊಂದಿದ್ದರು. ತಮ್ಮ ಮಾಜಿ ಬಾಯ್‌ಫ್ರೆಂಡ್‌ನ ನೆನಪಿನಿಂದ ಹೊರಬಂದಿದ್ದಾರೆಯೇ ಎಂಬ ಪ್ರಶ್ನೆಗೆ, ‘ಹೊರಗಿನಿಂದ ಹೌದು, ಆದರೆ ಒಳಗಿನಿಂದ ಇಲ್ಲ’ ಎಂದು ಸೋನು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಇನ್ನೊಬ್ಬರ ಬಗ್ಗೆ ಬರೆದಿದ್ದನ್ನು ನಂಬುತ್ತಾರೆ, ಆದರೆ ಹತ್ತಿರದವರ ಮಾತನ್ನು ಕೇಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾವು ಭಾವನಾತ್ಮಕ ವ್ಯಕ್ತಿ ಎಂದು ಒಪ್ಪಿಕೊಂಡಿರುವ ಸೋನು, ‘ನೇರವಾಗಿ ಭೇಟಿ ಮಾಡಿ ಮಾತನಾಡಿದರೆ, ನಾವು ಯಾರು ಎಂದು ತಿಳಿಯುತ್ತದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
