ಸಾಮಾನ್ಯವಾಗಿ ವಾರಾಂತ್ಯದ ಭರ್ಜರಿ ಗಳಿಕೆಯ ನಂತರ ದೊಡ್ಡ ಸಿನಿಮಾಗಳಿಗೆ ಸೋಮವಾರದ ದಿನ ಅತ್ಯಂತ ನಿರ್ಣಾಯಕವಾಗಿರುತ್ತದೆ. ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಚಿತ್ರ ‘ಧಮಾಲ್ 4’ ಸೋಮವಾರವೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ವಾರದ ದಿನಗಳಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 100 ಕೋಟಿ ರೂಪಾಯಿ ಗಳಿಕೆಯ ಗಡಿಯನ್ನು ದಾಟಿ ಹೊಸ ದಾಖಲೆ ಬರೆದಿದೆ.
ಸೋಮವಾರದ ಗಳಿಕೆ ಎಷ್ಟು?
ನಾಲ್ಕನೇ ದಿನವಾದ ಸೋಮವಾರ ಭಾರತದಾದ್ಯಂತ ಒಟ್ಟು 10,598 ಶೋಗಳಿಂದ ಈ ಚಿತ್ರ ಬರೋಬ್ಬರಿ 8.35 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ವೀಕ್‌ಡೇಸ್‌ನಲ್ಲಿ ಈ ಮಟ್ಟದ ಕಲೆಕ್ಷನ್ ಮಾಡಿರುವುದು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುದೀರ್ಘ ಕಾಲ ಓಡುವ ಮುನ್ಸೂಚನೆಯನ್ನು ನೀಡಿದೆ. ಇದು ತಂಡದ ಖುಷಿ ಹೆಚ್ಚಿಸಿದೆ.
4 ದಿನಗಳ ಒಟ್ಟು ಕಲೆಕ್ಷನ್ ವಿವರ
ಭಾರತದಲ್ಲಿ ಈ ಚಿತ್ರ 73.35 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 87.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ವಿದೇಶಿ ಮಾರುಕಟ್ಟೆಯ ಗಳಿಕೆ 14.50 ಕೋಟಿ ರೂಪಾಯಿ ಆಗಿದ್ದು, ವಿಶ್ವದಾದ್ಯಂತ ಒಟ್ಟು ಗಳಿಕೆ 102.35 ಕೋಟಿ ರೂಪಾಯಿ ಗಳಿಸಿದೆ.
ಧಮಾಲ್ ಸಿನಿಮಾದಲ್ಲಿ ಫೇಮಸ್ ಎಂದರೆ ಮೈಂಡ್ಲೆಸ್ ಕಾಮಿಡಿ. ಅದು ಈ ಚಿತ್ರದಲ್ಲೂ ಮುಂದುವರಿದಿದೆ. ನಿಧಿ ಹುಡುಕುವ ಥೀಮ್ನೊಂದಿಗೆ ಸಿನಿಮಾ ಸಾಗಿದೆ. ಈ ರೀತಿಯ ಮೈಂಡ್ಲೆಸ್ ಕಾಮಿಡಿಯನ್ನು ಕೆಲವರು ಇಷ್ಟಪಟ್ಟಿಲ್ಲ. ಹೀಗಾಗಿ, ಚಿತ್ರವನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಇನ್ನೂ ಕೆಲವರು ಚಿತ್ರವನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ‘ಧಮಾಲ್ 4’ ಟ್ರೇಲರ್ : ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ
ಅಜಯ್ ದೇವಗನ್, ರಿತೇಶ್ ದೇಶ್ಮುಖ್, ಅರ್ಷದ್ ವಾರ್ಸಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ಕಿಶನ್ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಅಂಜಲಿ ಆನಂದ್ ಸೇರಿದಂತೆ ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
