Headlines

ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆದ ‘ಆಲ್ಫಾ’; 7 ಸಾವಿರ ಶೋಗಳಿದ್ದರೂ ಗಳಿಸಿದ್ದು ಒಂದಂಕಿ – Kannada News | Alpha Movie Box Office Disaster: Alia Bhatt, Sharvari Starrer Fails Monday Test

ಬಾಲಿವುಡ್​ನ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಆಲ್ಫಾ’ (Alpha Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ಸೋಮವಾರ ಭಾರಿ ಹಿನ್ನಡೆ ಅನುಭವಿಸಿದೆ. ಸ್ಟಾರ್ ನಟಿಯರಾದ ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ವೀಕೆಂಡ್‌ನಲ್ಲಿ ಸಾಧಾರಣ ಗಳಿಕೆ ಕಂಡಿತ್ತು. ಈಗ ಸೋಮವಾರದ ಲಿಟ್ಮಸ್ ಟೆಸ್ಟ್‌ನಲ್ಲಿ ಸಂಪೂರ್ಣವಾಗಿ ಫೇಲ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಈ ಚಿತ್ರದಿಂದ ಭಾರೀ ನಷ್ಟ ಅನುಭವಿಸುವ ಭೀತಿ ಎದುರಿಸಿದೆ.

7 ಸಾವಿರ ಶೋ ಇದ್ದರೂ ಗಳಿಕೆ ಕೇವಲ 3.85 ಕೋಟಿ ರೂಪಾಯಿ

ಬಿಡುಗಡೆಯಾದ 4ನೇ ದಿನವಾದ ಸೋಮವಾರ ಈ ಚಿತ್ರಕ್ಕೆ ದೇಶಾದ್ಯಂತ ಸುಮಾರು 6,997 ಶೋಗಳು ಸಿಕ್ಕಿದ್ದವು. ಇಷ್ಟೊಂದು ದೊಡ್ಡ ಮಟ್ಟದ ಸ್ಕ್ರೀನಿಂಗ್ ಲಭ್ಯವಿದ್ದರೂ ಸಿನಿಮಾ ಗಳಿಸಿದ್ದು ಮಾತ್ರ ಕೇವಲ 3.85 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸೋಮವಾರದ ಒಟ್ಟಾರೆ ಆಕ್ಯುಪೆನ್ಸಿ ಕೇವಲ 13ರಷ್ಟು ಮಾತ್ರ ದಾಖಲಾಗಿದೆ. ಅಂದರೆ 100 ಸೀಟ್ ಇರುವ ಥಿಯೇಟರ್​​ನಲ್ಲಿ ತುಂಬಿದ್ದು ಕೇವಲ 13 ಜನ ಮಾತ್ರ.

4 ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

ಮೊದಲ ದಿನವಾದ ಶುಕ್ರವಾರ ಸಿನಿಮಾ 9.25 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ 11.50 ಕೋಟಿ ರೂಪಾಯಿ, ಭಾನುವಾರ 13.25 ಕೋಟಿ ರೂಪಾಯಿ, ಸೋಮವಾರ 3.85 ಕೋಟಿ ರೂಪಾಯಿ ಗಳಿಸಿದೆ. ನಾಲ್ಕು ದಿನಗಳ ಪ್ರದರ್ಶನದ ನಂತರ ‘ಆಲ್ಫಾ’ ಸಿನಿಮಾ ಭಾರತದಲ್ಲಿ ಒಟ್ಟು 37.85 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರ ಭಾರತದ ಒಟ್ಟು ಗ್ರಾಸ್ ಗಳಿಕೆ 45.34 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು?

ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಗಳಿಕೆ ಮಂದಗತಿಯಲ್ಲೇ ಸಾಗಿದ್ದು, 4ನೇ ದಿನ 1.50 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಸದ್ಯಕ್ಕೆ ಚಿತ್ರದ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 18.30 ಕೋಟಿ ರೂಪಾಯಿ ತಲುಪಿದೆ. ಜಾಗತಿಕವಾಗಿ (Worldwide) ಎಲ್ಲೂ ನಿರೀಕ್ಷಿತ ಮಟ್ಟದ ಹವಾ ಸೃಷ್ಟಿಸದ ಈ ಚಿತ್ರ, ನಾಲ್ಕು ದಿನಗಳಲ್ಲಿ ಒಟ್ಟಾರೆಯಾಗಿ 63.64 ಕೋಟಿ ಗ್ರಾಸ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *