Headlines

ಸ್ಟಾರ್ ನಟರ ಅಂಗರಕ್ಷಕರಿಗೆ ಕೋಟಿಗಳಲ್ಲಿ ಸಿಗುವುದು ಸಂಬಳ ನಿಜವೇ? – Kannada News | How much salary did celebrities bodyguards receive

ಸಿನಿಮಾ (Cinema) ಸೆಲೆಬ್ರಿಟಿಗಳಿಗೆ ಭದ್ರತೆಯ ಅವಶ್ಯಕತೆ ಬಹಳ ಇರುತ್ತದೆ. ಕೆಲವು ಸಿನಿಮಾ ಸ್ಟಾರ್​​ಗಳಿಗೆ ಸರ್ಕಾರವೇ ಭದ್ರತೆ ಒದಗಿಸುತ್ತದೆಯಾದರೂ ಬಹುತೇಕ ಎಲ್ಲ ಸ್ಟಾರ್ ನಟ, ನಟಿಯರು ಖಾಸಗಿ ಭದ್ರತೆಯವರನ್ನು ಇರಿಸಿಕೊಂಡಿರುತ್ತಾರೆ. ದೈತ್ಯ ದೇಹಿಗಳಾದ ಇವರುಗಳಿಗೆ ಸ್ಟಾರ್​ ನಟ, ನಟಿಯರ ಅಂಗರಕ್ಷಣೆಯೇ ಕೆಲಸ. ಅಂದಹಾಗೆ ಈ ಅಂಗರಕ್ಷಕರಿಗೆ ಅಥವಾ ಬಾಡಿಗಾರ್ಡ್​​ಗಳಿಗೆ ಸಿಗುವ ಸಂಬಳ ಎಷ್ಟು ಗೊತ್ತೆ? ಶಾರುಖ್ ಖಾನ್ ಅವರ ಮಾಜಿ ಬಾಡಿಗಾರ್ಡ್ ಇದೀಗ ಈ ಬಗ್ಗೆ ಮಾತನಾಡಿದ್ದಾರೆ.

ಕೆಲವು ಸ್ಟಾರ್ ನಟರ ಅಂಗರಕ್ಷಕರು ಬಹಳ ಜನಪ್ರಿಯರು ಸಹ ಆಗಿಬಿಡುತ್ತಾರೆ. ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ, ಶಾರುಖ್ ಖಾನ್ ಅಂಗರಕ್ಷಕ ರವಿ, ಸುದೀಪ್ ಅವರ ಅಂಗರಕ್ಷಕನೂ ಸಾಕಷ್ಟು ಜನಪ್ರಿಯ. ಅಂದಹಾಗೆ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ವರ್ಷಕ್ಕೆ ಸುಮಾರು 2.50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಶಾರುಖ್ ಖಾನ್ ಅಂಗರಕ್ಷನಿಗೆ ವರ್ಷಕ್ಕೆ 3 ಕೋಟಿ ಸಂಬಳವಂತೆ ಹೀಗೆ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಇದೀಗ ಶಾರುಖ್ ಖಾನ್ ಅವರ ಮಾಜಿ ಭದ್ರತಾ ವ್ಯವಸ್ಥಾಪಕ ಯಾಸಿನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದ ಮಾಜಿ ಭದ್ರತಾ ವ್ಯವಸ್ಥಾಪಕ ಯಾಸಿನ್ ಖಾನ್, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಭದ್ರತೆಯವರಿಗೆ ವರ್ಷಕ್ಕೆ 3-4 ಕೋಟಿ ಸಂಬಳ ಕೊಡುವ ಸುದ್ದಿಗಳು ಬಹುತೇಕ ಸುಳ್ಳು. ಅವರವರ ಜವಾಬ್ದಾರಿಯ ಮಟ್ಟಕ್ಕೆ ಅನುಗುಣವಾಗಿ ಅವರಿಗೆ ಸಂಭಾವನೆ ನೀಡಲಾಗುತ್ತದೆ. ಬಹುತೇಕ ಅಂಗರಕ್ಷಕರಿಗೆ ತಿಂಗಳಿಗೆ 1 ಲಕ್ಷದಿಂದ ಎರಡು ಲಕ್ಷ ರೂಪಾಯಿ ಸಂಬಳ ಇರುತ್ತದೆ. ಶೂಟಿಂಗ್, ಪಬ್ಲಿಕ್ ಕಾರ್ಯಕ್ರಮಗಳಿಗೆ ಹೋದಾಗ ತುಸು ಹೆಚ್ಚು ಹಣ ಸಿಗಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ:ನಂಬಿಕೆ ದ್ರೋಹ ಮಾಡಿದರು: ಬಾಲಿವುಡ್ ಸಿನಿಮಾ ವಿರುದ್ಧ ಮೃಣಾಲ್ ಠಾಕೂರ್ ಬೇಸರ

ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಮತ್ತು ಶಾರುಖ್ ಖಾನ್ ಅಂಗರಕ್ಷಕ ರವಿ ಸಿಂಗ್ ಅವರುಗಳಿಗೆ ಹೆಚ್ಚು ಸಂಭಾವನೆ ಸಿಗಬಹುದು, ಆದರೆ ಅವರಿಬ್ಬರು ಕೇವಲ ಉದ್ಯೋಗಿಗಳಾಗಿ ಉಳಿದಿಲ್ಲ, ಬದಲಿಗೆ ಆಯಾ ನಟರ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ದಶಕಗಳಿಂದ ಈ ನಟರ ನೆರಳಿನಂತೆ ಕೆಲಸ ಮಾಡುತ್ತಿರುವ ಇವರಿಗೆ ಸಿಗುವ ಗೌರವ ಮತ್ತು ಸೌಲಭ್ಯಗಳು ಅಗಾಧವಾಗಿರುತ್ತವೆ ಎಂದಿದ್ದಾರೆ ಯಾಸಿನ್.

ಸ್ಟಾರ್ ನಟರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಾವಿರಾರು ಜನ ಮುಗಿಬೀಳುತ್ತಾರೆ. ಅಂತಹ ಸಂದರ್ಭಗಳಲ್ಲಿ ನಟರ ಪ್ರಾಣ ರಕ್ಷಣೆ ಮಾಡುವುದು ಅತ್ಯಂತ ಕಠಿಣವಾದ ಕೆಲಸ. ಈ ಒತ್ತಡ ಮತ್ತು ಅಪಾಯವನ್ನು ಪರಿಗಣಿಸಿ ಅವರಿಗೆ ಈ ಮಟ್ಟದ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಶಾರುಖ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಅವರು ಬಾಲಿವುಡ್‌ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇವರು ಶಾರುಖ್ ಅವರ ಸಾರ್ವಜನಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಅವರ ವಿದೇಶಿ ಪ್ರವಾಸಗಳಲ್ಲೂ ಸದಾ ಜೊತೆಗಿರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *