Headlines

Pisces Horoscope: ಏಪ್ರಿಲ್ ನಲ್ಲಿ ಮೀನ ರಾಶಿಯವರಿಗೆ ಈ ಉದ್ಯೋಗ ಲಾಭಪ್ರದವಾಗಿ ಬರಲಿದೆ – Kannada News | Pisces April 2026 Horoscope: Career Success, Finance Insights and Relationship Challenges

ಮೀನ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳು ಜೀವನದ ಹೊಸ ಪಾಠಗಳನ್ನು ಕಲಿಯುವ ಹಾಗೂ ತಾಳ್ಮೆಯನ್ನು ಪರೀಕ್ಷಿಸುವ ಕಾಲ. ನಿಮ್ಮ ರಾಶಿಯಲ್ಲಿಯೇ ನಾಲ್ಕು ಗ್ರಹರಿದ್ದು, ಅನಂತರ ಮೂರು ಅಶುಭ ಗ್ರಹಗಳ ಸಂಯೋಗವಿರಲಿದೆ. ಏನೇ ಅಂದುಕೊಂಡರೂ ಅದನ್ನು ಸಾಧಿಸಿ ತೋರಿಸುವುದು ಕಷ್ಟ. ಪೂರ್ವಾಭಾದ್ರ ನಕ್ಷತ್ರದವರು ಅಲ್ಪ ಮಟ್ಟಿನ ಕಷ್ಟವನ್ನೂ, ಉತ್ತರಾಭಾದ್ರ, ರೇವತಿ ನಕ್ಷತ್ರದವರು ಅಧಿಕ ನೋವನ್ನೂ ಅನುಭವಿಸಬೇಕಾಗುವುದು.

​ಸಂಗಾತಿಯ ಜೊತೆ ಸಂಬಂಧ:

ಸಂಗಾತಿಯೊಂದಿಗೆ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡಬಹುದು. ಅನಗತ್ಯ ವಾದಗಳು ದೂರವಿರಲಿ. ಪರಸ್ಪರ ನಂಬಿಕೆ ಮತ್ತು ಪ್ರೀತಿಯಿಂದ ಈ ತಿಂಗಳ ಸವಾಲುಗಳನ್ನು ಎದುರಿಸಬಹುದು. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಆರ್ಥಿಕತೆ, ಆದಾಯ ಮತ್ತು ಖರ್ಚು :

​ಆದಾಯದ ಮೂಲಗಳು ಚೆನ್ನಾಗಿದ್ದರೂ, ಹಣ ಉಳಿಸುವುದು ಸ್ವಲ್ಪ ಕಷ್ಟವಾಗಬಹುದು. ನಿರೀಕ್ಷಿತ ಮೂಲಗಳಿಂದ ಹಣ ಬರುವುದು ಕೊಂಚ ವಿಳಂಬವಾಗಬಹುದು. ಶುಭ ಕಾರ್ಯಗಳಿಗೆ ಅಥವಾ ಧಾರ್ಮಿಕ ಕೆಲಸಗಳಿಗೆ ಧನವ್ಯಯವಾಗುವ ಸಾಧ್ಯತೆ ಇದೆ. ಸುಮ್ಮನೆ ಭೋಗ ವಸ್ತುಗಳ ಮೇಲೆ ಹಣ ಚೆಲ್ಲಬೇಡಿ.

ಸಾಲದ ಪರಿಸ್ಥಿತಿ :

ಈ ತಿಂಗಳು ಹೊಸದಾಗಿ ದೊಡ್ಡ ಮೊತ್ತದ ಸಾಲಕ್ಕೆ ಕೈ ಹಾಕದಿರುವುದು ಉತ್ತಮ. ​ಹಳೆಯ ಸಾಲಗಳನ್ನು ಮರುಪಾವತಿಸಲು ಬೇಕಾದ ಯೋಜನೆಗಳನ್ನು ರೂಪಿಸಿ. ಸಾಲದ ವಿಚಾರದಲ್ಲಿ ಯಾರನ್ನೂ ಕು ನಂಬಬೇಡಿ.

ಉದ್ಯೋಗ ಮತ್ತು ವ್ಯಾಪಾರ :

​ಕೆಲಸದಲ್ಲಿ ನಿಮ್ಮ ನಿಷ್ಠೆಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವರ್ಗಾವಣೆಗೆ ಕಾಯುತ್ತಿದ್ದವರಿಗೆ ಶುಭ ಸೂಚನೆ ಬರಲಿದೆ. ನಿಮ್ಮ ಸರ್ಜನಾತ್ಮಕತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ. ಉದ್ಯಮಿಗಳಿಗೆ ಲಾಭದಾಯಕ ತಿಂಗಳು. ಹೊಸ ಹೂಡಿಕೆಗೆ ಇದು ಸಕಾಲವಾದರೂ, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ.

ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ :

ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಕಡಿಮೆ. ಆಲಸ್ಯ ಅಥವಾ ಕ್ರೀಡೆ, ಮನೋರಂಜನೆಯ ಕಡೆ ಒಲವು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮನ್ಯ ಯಶಸ್ಸು ಸಿಗಬ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ವೀಸಾ ಮತ್ತು ದಾಖಲಾತಿ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರಲಿದೆ.

ಸರ್ಕಾರಿ ಕಾರ್ಯಗಳು:

ದೀರ್ಘಕಾಲದಿಂದ ಮುಂದುವರಿಯದೇ ಒಂದೆಡೆಗೆ ಬಿದ್ದಿದ್ದ ಸರ್ಕಾರಿ ಕೆಲಸಗಳು ಹಾಗೂ ಭೂಮಿಗೆ ಸಂಬಂಧಿಸಿದ ದಾಖಲೆಗಳ ಕಾರ್ಯಗಳು ವೇಗ ಪಡೆಯುತ್ತವೆ. ರಾಜಕೀಯ ಅಥವಾ ಆಡಳಿತ ರಂಗದಲ್ಲಿರುವವರಿಗೆ ಗೌರವ ಪ್ರಾಪ್ತಿಯನ್ನು ನಿರೀಕ್ಷಿಸಬಹುದು.

ಕೃಷಿ ಮತ್ತು ಆದಾಯ:

​ಕೃಷಿಕರಿಗೆ ಈ ತಿಂಗಳು ಉತ್ತಮ ಫಲಿತಾಂಶ ಸಿಗಲಿದೆ. ಹೈನುಗಾರಿಕೆ ಅಥವಾ ತೋಟಗಾರಿಕೆಯಲ್ಲಿ ಲಾಭ ನಿರೀಕ್ಷಿಸಬಹುದು. ಭೂಮಿಯಲ್ಲಿ ಹೊಸ ಬೆಳೆ ಬೆಳೆಯಲು ಕೃಷಿ ಭೂಮಿ ಸಮೃದ್ಧವಾಗಿಸುವುದು ಉತ್ತಮ. ಭೂಮಿಯ ಫಲವತ್ತತೆ ಮತ್ತು ನೀರಾವರಿ ಬಗ್ಗೆ ಹೆಚ್ಚಿನ ಗಮನ ಹರಿಸಿ.

​ಈ ತಿಂಗಳು ನಿಮ್ಮ ರಾಶಿಯಲ್ಲಿ ಗ್ರಹಗತಿಗಳ ಬದಲಾವಣೆಯಿರುವುದರಿಂದ ಮಾನಸಿಕ ಶಾಂತಿಗಾಗಿ ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಕೇಳಿಸಿಕೊಳ್ಳಿ. ಗುರುವಾರದಂದು ಹಳದಿ ಬಣ್ಣದ ಆಹಾರವನ್ನು ಸೇವಿಸಿ ಅಥವಾ ದಾನ ಮಾಡಿ, ನೀವೂ ಧರಿಸಿ.

– ಲೋಹಿತ ಹೆಬ್ಬಾರ್

Published On – 3:44 pm, Thu, 16 April 26

Source link

Leave a Reply

Your email address will not be published. Required fields are marked *