Headlines

ಸ್ವಾತಂತ್ರ್ಯ ದಿನದ ಪರೇಡ್ ವೇಳೆ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡ ತ್ರಿಷಾ – Kannada News | Trisha Spotted with Vijay Family at Independence Day Parade Event

ನಟಿ ತ್ರಿಷಾ ಹಾಗೂ ವಿಜಯ್ ಸಂಬಂಧದ ಬಗ್ಗೆ ಚರ್ಚೆ ಆಗುತ್ತಿರುವುದು ಇಂದು ನಿನ್ನೆಯಿಂದ ಅಲ್ಲ. ಇತ್ತೀಚೆಗೆ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೂ ಅಲ್ಲದೆ, ಪತಿಗೆ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಆರೋಪಿಸಿದ್ದು ಚರ್ಚೆಯ ಕೇಂದ್ರ ಬಿಂದು ಆಯಿತು. ಆ ಬಳಿಕ ವಿಜಯ್ ಜೊತೆ ತ್ರಿಷಾ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ಈಗ ತ್ರಿಷಾ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡು ಸುದ್ದಿ ಆಗಿದ್ದಾರೆ.

ದಳಪತಿ ವಿಜಯ್ ಅವರು ತಮಿಳುನಾಡಿನ ಸಿಎಂ. ಇಂದು ಚೆನ್ನೈನಲ್ಲಿ ಸ್ವಾತಂತ್ರ್ಯ ದಿನದ ಪರೇಡ್ ನಡೆದಿದೆ. ಈ ವೇಳೆ ವಿಜಯ್ ಅವರು ತೆರೆದ ವಾಹನದಲ್ಲಿ ನಿಂತು ಪೆರೇಡ್​​ನಲ್ಲಿ ನಿಂತವರಿಗೆ ಸೆಲ್ಯೂಟ್ ಮಾಡಿದ್ದಾರೆ. ಆಗ ವೇದಿಕೆಯಲ್ಲಿ ಕುಳಿತಿದ್ದ ವಿಜಯ್ ತಂದೆ-ತಾಯಿ ಹಾಗೂ ತ್ರಿಷಾ ತಿರುಗಿ ಸೆಲ್ಯೂಟ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಉದಯನಿಧಿ ಒಳ್ಳೆಯವರು, ಕೆಟ್ಟದಾಗಿ ಮಾತನಾಡೋ ಯೂಟ್ಯೂಬರ್​ಗಳ ಶಿಕ್ಷಿಸಿ’; ವಿಜಯ್​ಗೆ ವಿಶಾಲ್ ಬೇಡಿಕೆ

ಕೆಲವರು ವಿಜಯ್ ಅವರು ಸೆಲ್ಯೂಟ್ ಮಾಡಿದ್ದನ್ನು ತಪ್ಪಾಗಿ ಭಾವಿಸಿದ್ದಾರೆ. ‘ವಿಜಯ್ ಅವರು ತಂದೆ-ತಾಯಿ ಹಾಗೂ ತ್ರಿಷಾಗೆ ಸೆಲ್ಯೂಟ್ ಮಾಡಿದ್ದಾರೆ’ ಎಂದು ವಿಡಿಯೋ ವೈರಲ್ ಮಾಡಿದ್ದಾರೆ. ಆದರೆ, ಅಲ್ಲಿ ಅಸಲಿಯತ್ತೇ ಬೇರೆ ಇದೆ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ತಿದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.

ವಿಜಯ್ ಅವರ ಪತ್ನಿ ಸಂಗೀತಾ ಲಂಡನ್​ ಅಲ್ಲಿ ವಾಸವಿದ್ದಾರೆ. ವಿಜಯ್ ಅವರಿಂದ ವಿಚ್ಛೇದನ ಬೇಕು ಎಂದು ಚೆನ್ನೈನ ಫ್ಯಾಮಿಲಿ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಪದೇ ಪದೇ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅವರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ವಿಜಯ್ ಹಾಗೂ ಸಂಗೀತಾ ಮಧ್ಯೆ ಎಲ್ಲವೂ ಸರಿ ಆಯಿತು ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *