
ಬೆಂಗಳೂರು/ವಿಜಯಪುರ, (ಏಪ್ರಿಲ್ 08): ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ವಿರುದ್ಧ ಬೆಂಗಳೂರು ಮೂಲದ ಮಹಿಳೆಯೊಬ್ಬರು (Bengaluru Woman) ಲೈಂಗಿಕ ಕಿರುಕುಳ ಮತ್ತು ಬ್ಲಾಕ್ಮೇಲ್ ಆರೋಪ ಹೊರಿಸಿದ್ದು, ಈ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಆದ್ರೆ, ಮಹಿಳಾ ಆಯೋಗಕ್ಕೆ (women commission) ದೂರು ನೀಡಿದ್ದ ಮಹಿಳೆ ಇದೀಗ ದಿಢೀರ್ ನಾಪತ್ತೆಯಾಗಿದ್ದಾರೆ.ಮಠಕ್ಕೆ ಕರೆಸಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆ ವಿಡಿಯೋ ಮಾಡಿಕೊಂಡು ಪ್ರತಿನಿತ್ಯ ರಾತ್ರಿ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹೀಗೆ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಎಷ್ಟೇ ಹುಡುಕಾಡುತ್ತಿದ್ದರೂ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ.
ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದ ಮಹಿಳೆ ನಾಪತ್ತೆ
ಸ್ವಾಮೀಜಿ ವಿರುದ್ಧ ಆರೋಪ ಮಾಡಿದ ಮಹಿಳೆ ನಾಪತ್ತೆ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಈ ಸಂಬಂಧ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಸಂತ್ರಸ್ತ ಮಹಿಳೆಯಿಂದ ಅಧಿಕೃತ ದೂರು ಪಡೆಯಲು ಮುಂದಾಗಿದ್ದಾರೆ. ಆದ್ರೆ, ಮಹಿಳೆ ಮಾತ್ರ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಪೊಲೀಸರು ಎಷ್ಟೇ ಸಂಪರ್ಕಕ್ಕೆ ಯತ್ನ ಮಾಡಿದ್ರೂ ಸಂತ್ರಸ್ಥೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಹಿಳೆಯ ಅಧಿಕೃತ ನಿವಾಸಕ್ಕೂ ಪೊಲೀಸರು ತೆರಳಿ ಪರಿಶೀಲನೆ ಮಾಡಿದರೂ ಸಹ ಪತ್ತೆಯಾಗಿಲ್ಲ. ಮಹಿಳೆ ಫೋನ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ ಪೊಲೀಸರು ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!
ಸ್ವಾಮೀಜಿಯಿಂದ ದೂರು ದಾಖಲು
ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದಂತೆಯೆ ಅತ್ತ ವಿಜಯಪುರ ಗ್ರಾಮೀಣ ಠಾಣೆಗೆ ಸ್ವಾಮೀಜಿ ಹನಿಟ್ರ್ಯಾಪ್ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿ ನಂತರ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ಶಿಷ್ಯ ಸಂತೋಷ ಮಂಜಣ್ಣಿ ಮೂಲಕ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯು ಅನಾಥಾಶ್ರಮ ನಡೆಸುತ್ತಿರುವುದಾಗಿ ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದಳು. ನನ್ನ ತೇಜೋವಧೆ ಮಾಡುವುದಾಗಿ ಬೆದರಿಸಿ 3 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂಬಂಧ ಮಹಿಳೆ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿಯನ್ನು ಹನಿಟ್ರಾಪ್ ಮಾಡಲು ನಡೆದಿತ್ತಾ ಸಂಚು?: ಇದರ ಹಿಂದೆ ಶಾಸಕ ಕಾಶಪ್ಪನವರ್ ಕೈವಾಡ ಇದ್ಯಾ? ದೂರಿನಲ್ಲಿ ಬಿಚ್ಚಿಟ್ಟ ಸತ್ಯ!
ಸ್ವಾಮೀಜಿ ದೂರಿಗೆ ಹೆದರಿ ತಲೆಮರೆಸಿಕೊಂಡ್ರಾ?
ಸ್ವಾಮೀಜಿ ದೂರಿಗೆ ತಲೆಮರೆಸಿಕೊಂಡ್ರಾ? ಬೆಂಗಳೂರಿನ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದಂತೆಯೇ ಅತ್ತ ವಿಜಯಪುರಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಸಹ ಮಹಿಳೆ ಸೇರಿದಂತೆ ಇತರರ ವಿರುದ್ಧ ಹನಿಟ್ರ್ಯಾಪ್ ದೂರು ನೀಡಿದ್ದು, ಈ ಸಂಬಂಧ ವಿಜಯಪುರ ಪೊಲೀಸರು ಎಫ್ಐಆರ್ ದಾಖಸಿಕೊಂಡು ಮಹಿಳೆ ಹಾಗೂ ಖಾಸಗಿ ಚಾನಲ್ ಎಂಡಿ ಸೇರಿದಂತೆ ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಂಗಳೂರು, ಮಂಡ್ಯ, ವಿಜಯಪುರ ಸೇರಿದಂತೆ ಪಕ್ಕದ ರಾಜ್ಯಗಳಲ್ಲೂ ಕಾರ್ಯಚರಣೆ ನಡೆಸಿದ್ದಾರೆ. ಇದರಿಂದ ಭಯಗೊಂಡು ಮಹಿಳೆ ತಲೆಮರೆಸಿಕೊಂಡ್ರಾ ಎನ್ನುವ ಅನುಮಾಗಳು ವ್ಯಕ್ತವಾಗಿವೆ.
ಸ್ವಾಮೀಜಿಯದ್ದು ಎನ್ನಲಾದ ಕೆಲವು ಖಾಸಗಿ ವಿಡಿಯೋ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಒಂದು ಕಡೆ ಮಹಿಳೆಯು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರೆ, ಮತ್ತೊಂದೆಡೆ ಸ್ವಾಮೀಜಿ “ಇದು ವ್ಯವಸ್ಥಿತ ಪಿತೂರಿ ಮತ್ತು ಹನಿಟ್ರ್ಯಾಪ್ ಮಾದರಿಯ ಬ್ಲಾಕ್ಮೇಲ್,”ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಅಂತಿಮವಾಗಿ ಈ ಪ್ರಕರಣ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.