ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಅವರು 2009ರ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಿನಗಳ ವಿಡಿಯೋ ಆಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಪೂಜಾ ಹೆಗ್ಡೆ ಅವರು (Pooja Hegde) ಮಾಡೆಲಿಂಗ್ ಲೋಕದಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಈ ವಿಡಿಯದಲ್ಲಿ ನೋಡಬಹುದಾಗಿದೆ. ಅಂದಿನ ಅವರ ಲುಕ್ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ವೀಡಿಯೊದಲ್ಲಿ ತಮ್ಮನ್ನು ತಾವು ಮುಂಬೈನ 18 ವರ್ಷದ ಯುವತಿ ಎಂದು ಪರಿಚಯಿಸಿಕೊಳ್ಳುವ ಪೂಜಾ, ‘ಜೀವನದಲ್ಲಿ ಗೆಲ್ಲಬೇಕಾದರೆ ಕಠಿಣ ಪರಿಶ್ರಮ, ಮಾಡುವ ಕೆಲಸದ ಮೇಲೆ ತೀವ್ರ ಆಸಕ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು’ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇದರೊಂದಿಗೆ ತಾವು ಮೊದಲ ಬಾರಿಗೆ ರಾಂಪ್ ವಾಕ್ ಮಾಡಿದಾಗ ಸಣ್ಣದಾಗಿ ಎಡವಿದ್ದ ರಹಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ.
#PoojaHegde – Pantaloons Femina Miss India Contestant at the age of 18 🤯 pic.twitter.com/BFlJpM42JA
— Movies4u Official (@Movies4u_Officl) August 3, 2026
ಬಿಕಿನಿ ರೌಂಡ್ ಹಾಗೂ ಸಾಂಪ್ರದಾಯಿಕ ಉಡುಪುಗಳಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿರುವ ಪೂಜಾ ಹೆಗ್ಡೆ ಅವರ ಅಂದಿನ ರೂಪಕ್ಕೂ, ಇಂದಿನ ಗ್ಲಾಮರಸ್ ಲುಕ್‌ಗೂ ತುಂಬಾನೇ ವ್ಯತ್ಯಾಸವಿದ್ದು, ಬದಲಾವಣೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಕಡಿಮೆ ಸ್ಕ್ರೀನ್ ಟೈಮ್ ಇದ್ದರೂ ‘ಜನ ನಾಯಗನ್’ ಒಪ್ಪಿದ್ದೇಕೆ ಪೂಜಾ ಹೆಗ್ಡೆ? ಅಸಲಿ ಕಾರಣ ಇಲ್ಲಿದೆ
ಪೂಜಾ ಹೆಗ್ಡೆ ಅವರ ಸಿನಿಮಾ ಜರ್ನಿ
ಮಾಡಡೆಲಿಂಗ್ ಲೋಕದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಅವರು 2012ರ ತಮಿಳಿನ ‘ಮುಗಮೂಡಿ’ ಚಿತ್ರದ ಮೂಲಕ ನಟನೆ ಆರಂಭಿಸಿದರು. ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಭಾರಿ ಯಶಸ್ಸು ಕಂಡ ಅವರು ‘ಅರವಿಂದ ಸಮೇದ’, ‘ಮಹರ್ಷಿ’, ಮತ್ತು ‘ಅಲಾ ವೈಕುಂಠಪುರಮುಲೋ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದರು. ಹೃತಿಕ್ ರೋಷನ್ ಅಭಿನಯದ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಪೂಜಾ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ‘ರಾಧೆ ಶ್ಯಾಮ್’ ಹಾಗೂ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರಗಳಲ್ಲೂ ಕಾಣಿಸಿಕೊಂಡು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಅವರ ನಟನೆಯ ‘ಜನ ನಾಯಗನ್’ ಇತ್ತೀಚೆಗೆ ತೆರೆಗೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 2:47 pm, Mon, 3 August 26
