ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ; ಸಿಬ್ಬಂದಿಯಿಂದಲೇ ಕೃತ್ಯ! – Kannada News | Hubballi 24 Kg Silver Heist: Rs 59 Lakh Jewelry Stolen in Daring Daylight Robbery

ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ; ಸಿಬ್ಬಂದಿಯಿಂದಲೇ ಕೃತ್ಯ!

ಹುಬ್ಬಳ್ಳಿ, ಮಾರ್ಚ್​ 04: ನಗರದಲ್ಲಿ ಹಾಡ ಹಗಲೇ ಸುಮಾರು 59 ಲಕ್ಷ ರೂಪಾಯಿ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಲ್ಯಾಮಿಂಗ್ಟನ್ ರಸ್ತೆಯಲ್ಲಿ (Hubli) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ಯೋಗೀಶ್ ಹಾಗೂ ಅವನ ಗ್ಯಾಂಗ್ ಸೇರಿ ಈ ಕೃತ್ಯವೆಸಗಿಎಬಹುದಯ ಎಂಬ ಶಂಕೆ ವ್ಯಕ್ತವಾಗಿದೆ.

ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವ ಆರೋಪಿ

ಬೆಂಗಳೂರು ಮೂಲದ ವ್ಯಾಪಾರಿ ಆಶಿಷ್ ಕುಮಾರ್​ಗೆ ಸೇರಿದ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಮೀತ್ ಪುರೋಹಿತ್ ಹಾಗೂ ಯೋಗೀಶ್ ಸಿಂಗ್​ಗೆ ನೀಡಲಾಗಿತ್ತು. ಮಾಲೀಕರು ತಮ್ಮದೇ ಕಾರಿನಲ್ಲಿ ಒಟ್ಟು 29 ಕೆಜಿ ಬೆಳ್ಳಿ ಆಭರಣಗಳನ್ನು ನೀಡಿ ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಮಾರಾಟ ಮಾಡಲು ಸೂಚಿಸಿದ್ದರು. ಅದರಲ್ಲಿ 3.167 ಕೆಜಿ ಆಭರಣಗಳನ್ನು ಮಾರಾಟ ಮಾಡಲಾಗಿದ್ದು, ಉಳಿದ 24.760 ಕೆಜಿ ಆಭರಣಗಳನ್ನು ಮಾರಾಟ ಮಾಡಲು ಆರೋಪಿಗಳು ಹುಬ್ಬಳ್ಳಿಗೆ ಬಂದಿದ್ದರು.

ಫೆಬ್ರವರಿ 28ರಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಸಮೀಪದ ಆಭರಣ ಅಂಗಡಿಗೆ ತೆರಳಿದ ವೇಳೆ, ಕಾರಿನಲ್ಲಿ ಇದ್ದ ಎರಡು ಬ್ಯಾಗ್‌ಗಳಲ್ಲಿ ಕಾಲ್ಗೆಜ್ಜೆ, ಕತ್ತಿನ ಚೈನ್, ಬ್ರಾಸ್‌ಲೇಟ್, ಕೈಕಡಗ ಸೇರಿದಂತೆ ವಿವಿಧ ಬೆಳ್ಳಿ ಆಭರಣಗಳನ್ನು ಆರೋಪಿಗಳು ಗಮನಿಸಿದ್ದರು. ಈ ವೇಳೆ ಯೋಗೀಶ್ ಸಿಂಗ್ ಕಾರಿನ ಕೀಲಿಯನ್ನು ಪಡೆದು ಕಾರನ್ನು ಲಾಕ್ ಮಾಡಿ, ಬೆಳ್ಳಿ ಆಭರಣಗಳಿದ್ದ ಎರಡು ಬ್ಯಾಗ್‌ಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *