ಹಾಸನ, ಜನವರಿ 17: ಹಾಸನದ ಸಕಲೇಶಪುರದ ಗ್ರಾಮದಲ್ಲಿ ಮಹಿಳೆಯ ಬಲಿ ಪಡೆದಿದ್ದ, ಜನರಿಗೆ ತೊಂದರೆ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೇಲೂರು ತಾಲೂಕಿನ ಬೆಳ್ಳಾವರ ಕಾಫಿ ತೋಟದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಹಿಡಿಯಲಾಗಿದೆ. ಜನವರಿ 13ರಂದು ಮೊಗಲಿಯಲ್ಲಿ ಓರ್ವ ಮಹಿಳೆಯನ್ನು ಬಲಿತೆಗೆದುಕೊಂಡಿದ್ದ ಈ ಕಾಡಾನೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
