ಲೆನ್ಸ್ಕಾರ್ಟ್ ಶೋರೂಮ್Image Credit source: Saishna96, Wikipedia
ನವದೆಹಲಿ, ಏಪ್ರಿಲ್ 16: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ, ಮತಾಂತರ ಕುಮ್ಮಕ್ಕು ಇತ್ಯಾದಿ ಕರ್ಮಕಾಂಡಗಳು ಬೆಳಕಿಗೆ ಬಂದು ವಿವಾದ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಲೆನ್ಸ್ಕಾರ್ಟ್ (Lenskart) ಸಂಸ್ಥೆಯ ಉದ್ಯೋಗಿಗಳಿಗೆ ನೀಡಲಾಗಿರುವ ಸ್ಟೈಲ್ಗೈಡ್ನ ಕೆಲ ಅಂಶಗಳು ಹೊಸ ವಿವಾದ ಹುಟ್ಟುಹಾಕಿವೆ. ಸ್ಟೈಲ್ಗೈಡ್ನಲ್ಲಿ ಧರ್ಮತಾರತಮ್ಯ ಮಾಡಲಾಗಿರುವ ನಿಯಮಗಳನ್ನು ಹಲವರು ಎತ್ತಿ ತೋರಿಸಿದ್ದಾರೆ.
ಲೆನ್ಸ್ಕಾರ್ಟ್ ಸ್ಟೈಲ್ಗೈಡ್ಗೆ ಆನ್ಲೈನ್ನಲ್ಲಿ ತಕರಾರು
ಲೆನ್ಸ್ಕಾರ್ಟ್ನ ಉದ್ಯೋಗಿಗಳ ಸ್ಟೈಲ್ಗೈಡ್ನಲ್ಲಿರುವ ಕೆಲ ನಿಯಮಗಳು, ಅದರಲ್ಲೂ ಧಾರ್ಮಿಕ ಸೂಕ್ಷ್ಮತೆ ಇರುವ ನಿಯಮಗಳ ಬಗ್ಗೆ ಆನ್ಲೈನ್ನಲ್ಲಿ ಸಾಕಷ್ಟು ತಕರಾರುಗಳು ಎದ್ದಿವೆ. ‘ಹಿಜಾಬ್ಗೆ ಅನುಮತಿ ಕೊಡಲಾಗಿದೆ. ಆದರೆ, ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆಬೊಟ್ಟು ಇಡುವ ಅವಕಾಶ ನೀಡಲಾಗಿಲ್ಲ ಯಾಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ
‘ಇದು ಮೂರ್ಖತನ. ಲೆನ್ಸ್ಕಾರ್ಟ್ ಮಾನಗೆಟ್ಟ ಕಂಪನಿ. ಬಿಂದಿಯಲ್ಲಿ ಏನು ತಪ್ಪು ಕಂಡಿದ್ದಾರೆ. ಅವರಿಗೆ ಭಾರತದಲ್ಲಿ ಬ್ಯುಸಿನೆಸ್ ಮಾಡಬೇಕು, ಆದರೆ ಜನರ ಭಾವನೆಗಳಿಗೆ ಬೆಲೆ ಕೊಡುವುದು ಬೇಡ’ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೆಫಾಲಿ ವೈದ್ಯ ಟ್ವೀಟ್
Dear @peyushbansal please specify how exactly is the policy document ‘inaccurate’. I have attached a screen shot that clearly states ‘hijab is okay, but bindi and kalawa are not’. That is religious asymmetry. Please DO SHARE your ‘present guidelines’ as of today, so we know… https://t.co/UsogiOymY5
— Shefali Vaidya. 🇮🇳 (@ShefVaidya) April 16, 2026
‘ನಾನು ಯಾವತ್ತೂ ಲೆನ್ಸ್ಕಾರ್ಟ್ನಿಂದ ಕನ್ನಡಕ ಖರೀದಿಸುವುದಿಲ್ಲ. ಇತ್ತೀಚೆಗೆ ನನ್ನ ಕುಟುಂಬದ ಸದಸ್ಯರು ಭಾರತಕ್ಕೆ ಹೋಗಿ ಇಲ್ಲಿ ತಮ್ಮ ಗ್ಲಾಸ್ಗಳನ್ನು ಪಡೆದಿದ್ದರು. ಈ ಹಿಂದೂ ವಿರೋಧಿ ಸಂಸ್ಥೆಗೆ ಹಣ ವೆಚ್ಚ ಮಾಡಬೇಡಿ ಎಂದು ಅವರಿಗೆ ಈಗ ಹೇಳುತ್ತೇನೆ’ ಎಂದು ಮಗದೊಬ್ಬರು ಕಾಮೆಂಟಿಸಿದ್ದಾರೆ.
ಲೆನ್ಸ್ಕಾರ್ಟ್ ಸ್ಟೈಲ್ಗೈಡ್ನಲ್ಲಿ ವಿವಾದವಾಗಿರುವ ಅಂಶಗಳಿವು…
- ಕಪ್ಪು ಬಣ್ಣದ ಪೇಟ (sikh turban) ಧರಿಸಬಹುದು.
- ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು
- ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ಯಾಟೂಗಳನ್ನು ಹಾಕಿಕೊಂಡಿದ್ದರೆ ಅದು ಕಣ್ಣಿಗೆ ಗೋಚರಿಸದಂತಿರಬೇಕು.
- ಹೆನ್ನಾ (ಗೋರಂಟಿ) ಹಾಕುವಂತಿಲ್ಲ. ವಿಶೇಷ ಸಂದರ್ಭವಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು.
- ಧಾರ್ಮಿಕ ತಿಲಕ, ಹಣಬೊಟ್ಟು ಹಾಕುವಂತಿಲ್ಲ.
ಇದನ್ನೂ ಓದಿ: ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?
ಲೆನ್ಸ್ಕಾರ್ಟ್ ಸಂಸ್ಥಾಪಕರ ಸ್ಪಷ್ಟನೆ
ಲೆನ್ಸ್ಕಾರ್ಟ್ ಸ್ಟೈಲ್ಗೈಡ್ ವಿಚಾರ ಆನ್ಲೈನ್ನಲ್ಲಿ ಟ್ರೋಲ್ ಆಗುತ್ತಿರುವಂತೆಯೇ ಸಂಸ್ಥೆಯ ಸಂಸ್ಥಾಪಕ ಪಿಯುಸ್ ಬನ್ಸಾಲ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ವೈರಲ್ ಆಗುತ್ತಿರುವ ದಾಖಲೆಯು ಸರಿಯಿಲ್ಲ. ನಮ್ಮ ಈಗಿನ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅವರ ಈ ಟ್ವೀಟ್ಗೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ಲೆನ್ಸ್ಕಾರ್ಟ್ನ ಈ ಪಾಲಿಸಿ ಡಾಕ್ಯುಮೆಂಟ್ 2026ರ ಫೆಬ್ರುವರಿಯದ್ದು. ಈಗ ಬದಲಾಗಿರುವ ಪಾಲಿಸಿ ಡಾಕ್ಯುಮೆಂಟ್ ಇದ್ದರೆ ತೋರಿಸಿ ಎಂದು ಅನೇಕರು ಸವಾಲು ಹಾಕಿದ್ದಾರೆ.
ವೈರಲ್ ಆಗುತ್ತಿರುವ ಲೆನ್ಸ್ಕಾರ್ಟ್ ಪಾಲಿಸಿ ಡಾಕ್ಯುಮೆಂಟ್ಗೆ ಲಿಂಕ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
