ಬೆಳಗಾವಿ, (ಮೇ 01): ಒಂದೆಡೆ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಸ್ಥಿತಿ ಎದುರಾಗಿದೆ. ಹೌದು…ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರ ಬಳಿ ಇರುವ 51ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ (Hidkal Dam) ಬಹುತೇಕ ಖಾಲಿಯಾಗಿದೆ. ಇದರ ಪರಿಣಾಮ ಡ್ಯಾಂ ಹಿನ್ನೀರಿನಲ್ಲಿ ಮುಳುಗಿದ್ದ ದೇವಸ್ಥಾನ ಗೋಚರವಾಗಿದೆ. ವಿಠ್ಠಲ ದೇವಸ್ಥಾನ 1978ರಿಂದ ನೀರಲ್ಲೇ ಮುಳುಗಿ ಹೋಗಿದೆ. ಆದ್ರೆ, 2022ರಲ್ಲಿ ಜಲಾಶಯದಲ್ಲಿ ನೀರು ಖಾಲಿಯಾಗಿದ್ದಾಗ ವಿಠ್ಠಲ ಭಕ್ತರಿಗೆ ದರ್ಶನ ನೀಡಿದ್ದ. ಗುತ್ತಿ ಮಣ್ಣನಿಂದ ನಿರ್ಮಿಸಿರುವ ದೇವರ ಮೂರ್ತಿ ನಿರಂತರವಾಗಿ ನೀರಲ್ಲಿದ್ದರೂ ಸಹ ಎನೂ ಆಗಿಲ್ಲ. ಈ ಬಾರಿ ಸಹ ಅತೀ ಹೆಚ್ಚು ಬಿಸಿಲು ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಖಾಲಿಯಾಗಿದ್ದು, ಸಂಪೂರ್ಣವಾಗಿ ದೇವಸ್ಥಾನ ಓಪನ್ ಆಗುವ ಸಾಧ್ಯತೆಗಳಿವೆ. ಈ ಕುರಿತು ನಮ್ಮ ಪ್ರತಿನಿಧಿ ಸ್ಥಳದಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
