ಖಾಸಗಿ ಫೋಟೋ ವೈರಲ್ ಆದಾಗ ಅಥವಾ ಕೆಲವರು ಎಡಿಟ್ ಮಾಡಿದ ಫೋಟೋ ಹರಿದಾಡಿದಾಗ ನಟಿಯರು ಸುಮ್ಮನೆ ಇರೋದಿಲ್ಲ. ಈಗ ನಟಿ ಮೃಣಾಲ್ ಠಾಕೂರ್ (Mrunal Thakur) ಕೂಡ ಇದನ್ನೇ ಮಾಡಿದ್ದಾರೆ. ಅವರ ಎಐ ಫೋಟೋಗಳು ಸೋಶಿಶಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೈಬರ್ ಅಪರಾಧಿಗಳ ವಿರುದ್ಧ ಕಾನೂನು ಸಮರ ಸಾರಲು ಅವರು ಸಜ್ಜಾಗಿದ್ದಾರೆ. ತಿರುಚಲಾದ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳು ಕೂಡ ನಟಿಯ ಬೆಂಬಲಕ್ಕೆ ನಿಂತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸೋಶಿಯಲ್ ಮೀಡಿಯಾದ ಎಕ್ಸ್ ಖಾತೆಯೊಂದರಲ್ಲಿ ಮೃಣಾಲ್ ಅವರದ್ದು ಎನ್ನಲಾದ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡು ನಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಫೋಟೊ ಹಂಚಿಕೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರ. ತಕ್ಷಣವೇ ಈ ಪೋಸ್ಟ್ ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಸೈಬರ್ ಪೊಲೀಸ್ ದೂರು ನೀಡುವುದಾಗಿ ಮೃಣಾಲ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Creating or sharing deepfake content using my likeness is illegal and unacceptable. Consider this your formal notice to stop immediately. Any further misuse of my identity will result in legal action.
— Mrunal Thakur (@mrunal0801) August 3, 2026
ಚಿತ್ರರಂಗದ ನಟಿಯರಿಗೆ ಎಐ ತಂತ್ರಜ್ಞಾನದ ದುರ್ಬಳಕೆ ದೊಡ್ಡ ತಲೆನೋವಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ಇದೇ ರೀತಿಯ ಡಿಜಿಟಲ್ ಕಿರುಕುಳಕ್ಕೆ ಒಳಗಾಗಿದ್ದರು. ಎಚ್ಚರಿಕೆ ನೀಡಿದ ಮೇಲೆಯೂ ಈ ಚಿತ್ರಗಳು ಜಾಲತಾಣದಲ್ಲಿ ಇವೆ. ಹೀಗಾಗಿ ಮುಂದಿನ ಕಾನೂನು ಕ್ರಮಗಳ ಮೇಲೆ ಎಲ್ಲರ ಕಣ್ಣಿದೆ.
ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಹುಟ್ಟಿದೆ ವದಂತಿ
ಇತ್ತೀಚೆಗೆ ‘ಹೇ ಜವಾನಿ ತೋ ಇಷ್ಕ್ ಹೊನಾ ಹೇ’ ಮತ್ತು ‘ಡಕಾಯತ್’ ಸಿನಿಮಾಗಳ ಮೂಲಕ ಮೃಣಾಲ್ ಗಮನ ಸೆಳೆದಿದ್ದಾರೆ. ಸದ್ಯ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅಲ್ಲು ಅರ್ಜುನ್ ಅವರ ಮುಂದಿನ ‘ರಾಕಾ’ ಸಿನಿಮಾದಲ್ಲೂ ಅವರು ಅಭಿನಯಿಸಲಿದ್ದಾರೆ ಎನ್ನಲಾಗಿದೆ. ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟಿಗೆ ಈಗ ಈ ನಕಲಿ ಫೋಟೊಗಳ ಕಿರಿಕಿರಿ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
