‘ಹೀರೋಗಳು ಲೇಡಿ ಡೈರೆಕ್ಟರ್ ಮಾತು ಕೇಳಲ್ಲ, ಆದ್ರೆ ಯಶ್ ಹಾಗಲ್ಲ’; ಹುಮಾ ಖುರೇಷಿ – Kannada News | Yash Toxic Huma Qureshi Praises Geetu Mohandas, Calls Film Unique Teaser Out

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ‘ಲೇಡಿಸ್ ಆ್ಯಂಡ್ ಲೇಡಿಸ್’ ಅನ್ನೋದು ಟೀಸರ್ ಟೈಟಲ್. ಈ ಟೀಸರ್ ಮೂಲಕ ಎಲ್ಲಾ ಮಹಿಳಾ ಪಾತ್ರಗಳನ್ನು ಪರಿಚಯಿಸಲಾಗಿದೆ. ಈ ಗ್ಯಾಂಗ್‌ಸ್ಟರ್ ಸಿನಿಮಾವನ್ನು ನೋಡಲು ಅಭಿಮಾನಿಗಳು ಸಖತ್ ಕಾತರರಾಗಿದ್ದಾರೆ. ಚಿತ್ರದ ದೊಡ್ಡ ತಾರಾಗಣವೇ ಈ ಕುತೂಹಲಕ್ಕೆ ಮುಖ್ಯ ಕಾರಣ. ಇದೀಗ ಚಿತ್ರದಲ್ಲಿ ‘ಎಲಿಜಬೆತ್’ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಹುಮಾ ಖುರೇಷಿ ಸಿನಿಮಾದ ಬಗ್ಗೆ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಎಲ್ಲರನ್ನೂ ಬೆಚ್ಚಿಬೀಳಿಸಲಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹುಮಾ ಖುರೇಷಿ ಅವರಿಗೆ ‘ಟಾಕ್ಸಿಕ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ‘ಜನರು ಈ ಹಿಂದೆಂದೂ ಇಂತಹ ಸಿನಿಮಾವನ್ನು ನೋಡಿಲ್ಲ. ಚಿತ್ರದಲ್ಲಿ ನಟಿಸಿರುವ ಎಲ್ಲಾ ನಟಿಯರು ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದು ಹೇಳಿದ್ದಾರೆ. ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಕೆಲಸವನ್ನು ಹುಮಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಿನಿಮಾ ರಂಗದಲ್ಲಿ ಮಹಿಳಾ ನಿರ್ದೇಶಕಿಯಾಗಿ ಕೆಲಸ ಮಾಡುವುದು ಸುಲಭವಲ್ಲ ಎಂದು ಹುಮಾ ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಅನೇಕ ನಟರು ಮಹಿಳಾ ನಿರ್ದೇಶಕಿಯರ ಮಾತು ಕೇಳಲು ಇಷ್ಟಪಡುವುದಿಲ್ಲ. ಆದರೆ ಗೀತು ಮೋಹನ್ ದಾಸ್ ಅವರು ಯಶ್ ಅವರಂತಹ ಸೂಪರ್‌ಸ್ಟಾರ್ ಜೊತೆ ಅತ್ಯಂತ ಆರೋಗ್ಯಕರವಾದ ಒಡನಾಟ ಇಟ್ಟುಕೊಂಡು ಈ ಚಿತ್ರವನ್ನು ಮುನ್ನಡೆಸುತ್ತಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಮೀರಿ ನಿಲ್ಲಲಿದೆ’ ಎಂದು ಹುಮಾ ಖುರೇಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ನಟ ಯಶ್ ಅವರು ಹುಮಾ ಖುರೇಷಿ ಅವರ ಧೈರ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡಿದ್ದಾರೆ. ಹುಮಾ ನಟಿಸಿ, ನಿರ್ಮಿಸಿರುವ ‘ಬೇಬಿ ಡೋ ಡೈ ಡೋ’ ಚಿತ್ರದ ಬಗ್ಗೆ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರ ನಿರ್ಮಾಣ ಮಾಡುವುದು ಸುಲಭವಲ್ಲ, ಅದಕ್ಕೆ ಸಾಕಷ್ಟು ಧೈರ್ಯ ಬೇಕು ಎಂದು ಹೇಳಿದ್ದಾರೆ. ಹುಮಾ ಅವರ ಈ ಪ್ರಯತ್ನಕ್ಕೆ ಯಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್​​ಗೆ ಕಾದು ಕುಳಿತವರಿಗೆ ಗುಡ್ ನ್ಯೂಸ್

‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಆಗಸ್ಟ್ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:05 pm, Mon, 6 July 26

Source link

Leave a Reply

Your email address will not be published. Required fields are marked *