ಹೆಣ್ಣುಮಕ್ಕಳ ಪೈಜಾಮದ ದಾರ ಸಡಿಲಿಸುವುದು ಕೂಡ ಅತ್ಯಾಚಾರದ ಪ್ರಯತ್ನ: ಸುಪ್ರೀಂಕೋರ್ಟ್​ – Kannada News | Supreme Court: Loosening Pajama String Is Attempted physical Assault Under POCSO, Overturns HC

ನವದೆಹಲಿ, ಫೆಬ್ರವರಿ 18: ಹೆಣ್ಣುಮಕ್ಕಳ ಪೈಜಾಮದ ದಾರ ಸಡಿಲಿಸುವುದು ಕೂಡ ಅತ್ಯಾಚಾರ ಪ್ರಯತ್ನ ಎಂದು ಸುಪ್ರೀಂಕೋರ್ಟ್(Supreme Court)​ ಅಭಿಪ್ರಾಯಪಟ್ಟಿದೆ. ಹೆಣ್ಣುಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸುವುದು ಪ್ಯಾಂಟ್ ದಾರವನ್ನು ಸಡಿಲಗೊಳಿಸುವುದು ಕೂಡ ಅತ್ಯಾಚಾರದ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿತು, ವಿವಾದಾತ್ಮಕ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು, ಹೈಕೋರ್ಟ್​ ಈ ಅಪರಾಧವನ್ನು ಅತ್ಯಾಚಾರಕ್ಕೆ ಸಿದ್ಧತೆ ಎಂದು ವಿವರಿಸಿತ್ತು, ಪ್ರಯತ್ನವಲ್ಲ ಎಂದು ಹೇಳಿತ್ತು. ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಮಾರ್ಚ್ 17, 2025 ರಂದು ನೀಡಲಾಯಿತು. ನ್ಯಾಯಾಲಯದ ತೀರ್ಪು ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು.

ವೀ ದಿ ವುಮೆನ್ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷೆ ಮತ್ತು ಹಿರಿಯ ವಕೀಲೆ ಶೋಭಾ ಗುಪ್ತಾ ಅವರ ಪತ್ರದ ನಂತರ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು. ಮಂಗಳವಾರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು ಮತ್ತು ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಠಿಣ ಆರೋಪವನ್ನು ಎದುರಿಸುವಂತಾಗಿದೆ.

ಮತ್ತಷ್ಟು ಓದಿ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ಸಂವೇದನೆ ಇರಬೇಕು ಎಂದು ಎನ್‌ಜಿಒ ಅಧ್ಯಕ್ಷೆ ಶೋಭಾ ಗುಪ್ತಾ ಮತ್ತು ಹಿರಿಯ ವಕೀಲೆ ಎಚ್.ಎಸ್. ಫೂಲ್ಕಾ ಅವರು ಪೀಠಕ್ಕೆ ಮನವಿ ಮಾಡಿದ್ದರು. ಯಾವುದೇ ನ್ಯಾಯಮೂರ್ತಿಗಳು ಅಥವಾ ನ್ಯಾಯಾಲವು ವಾಸ್ತವತೆ ಮತ್ತು ಮಹಿಳೆಯರು ಎದುರಿಸಬಹುದಾದ ಸಂದರ್ಭಗಳ ಬಗ್ಗೆ ಸಂವೇದನಾಶೀಲರಲ್ಲದಿದ್ದರೆ ಸಂಪೂರ್ಣ ನ್ಯಾಯವನ್ನು ಕೊಡುತ್ತಾರೆ ಎಂದು ಅಪೇಕ್ಷಿಸಲು ಸಾಧ್ಯವಿಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *