ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಲಕ್ನೋ, ಮಾ.8: ಉತ್ತರ ಪ್ರದೇಶದ ಹೆಣ್ಣುಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರ ಶಿಕ್ಷಣಕ್ಕೆ ಬೆಂಬಲ ನೀಡಲು ಜನನದಿಂದ ಪದವಿ ಪೂರೈಸುವವರೆಗೆ ಸಮಗ್ರ ಹಣಕಾಸಿನ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಘೋಷಿಸಿದ್ದಾರೆ. ಇಂದು (ಮಾ.8) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ರೋಜ್‌ಗಾರ್ ಸಂಗಮ್’ (Rozgar Sangam) ಪೋರ್ಟಲ್‌ನ ಮೊಬೈಲ್ ಆಪ್ ಬಿಡುಗಡೆ ಮಾಡಿದರು ಮತ್ತು ನೂತನವಾಗಿ ಆಯ್ಕೆಯಾದ ಸೇವಕಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಹೆಣ್ಣು ಮಗು ಜನಿಸಿದ ತಕ್ಷಣ ಅಧಿಕೃತ ಜನ್ಮ ನೋಂದಣಿ ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿದರೆ, ಮಗುವಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಹೆಣ್ಣು ಮಗುವಿಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸಲು ಸರ್ಕಾರವು ಹಣಕಾಸಿನ ನೆರವು ನೀಡಲಿದೆ.

ಮಗು ಒಂದನೇ ತರಗತಿಗೆ ದಾಖಲಾದಾಗ, 5ನೇ ತರಗತಿ ಪಾಸಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಾಗಲೂ ಆರ್ಥಿಕ ನೆರವು ಸಿಗಲಿದೆ. ಹೈಸ್ಕೂಲ್, ಇಂಟರ್ ಮೀಡಿಯಟ್ ಮುಗಿಸಿ ಉನ್ನತ ಶಿಕ್ಷಣ ಅಥವಾ ಇತರ ವೃತ್ತಿಪರ ಶಿಕ್ಷಣಕ್ಕೆ ಸೇರುವವರೆಗೆ ಈ ಪ್ರಕ್ರಿಯೆಯು ಮುಂದುವರಿಯಲಿದೆ.

ಹೆಣ್ಣುಮಕ್ಕಳು ಇನ್ನು ಮುಂದೆ ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. ಅವರ ಶಿಕ್ಷಣವನ್ನು ಬೆಂಬಲಿಸಲು ಸರ್ಕಾರವು ಹುಟ್ಟಿನಿಂದ ಪದವಿಯವರೆಗೆ ಸಂಪೂರ್ಣ ಪ್ಯಾಕೇಜ್ ಒದಗಿಸಲಿದೆ” ಎಂದು ಸಿಎಂ ಆದಿತ್ಯನಾಥ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಹಣ ಪಾವತಿಯ ಹಂತಗಳು:

ಹಂತ 1 (ಜನನ): ಹೆಣ್ಣು ಮಗು ಜನಿಸಿದಾಗ – ₹5,000.

ಹಂತ 2 (ಲಸಿಕೆ): ಮಗುವಿಗೆ ಒಂದು ವರ್ಷ ತುಂಬಿ, ಎಲ್ಲಾ ಲಸಿಕೆಗಳನ್ನು ಹಾಕಿಸಿದ ನಂತರ – ₹2,000.

ಹಂತ 3 (ಒಂದನೇ ತರಗತಿ): 1ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 4 (ಆರನೇ ತರಗತಿ): 6ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 5 (ಒಂಬತ್ತನೇ ತರಗತಿ): 9ನೇ ತರಗತಿಗೆ ಪ್ರವೇಶ ಪಡೆದಾಗ – ₹5,000.

ಹಂತ 6 (ಉನ್ನತ ಶಿಕ್ಷಣ): 10/12ನೇ ತರಗತಿ ಮುಗಿಸಿ ಪದವಿ ಅಥವಾ ಡಿಪ್ಲೊಮಾಗೆ ಸೇರಿದಾಗ – ₹7,000.

ಅರ್ಹತೆಗಳು: ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಒಂದು ಕುಟುಂಬದ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *