ತುಮಕೂರು, ಆಗಸ್ಟ್ 12: ತುಮಕೂರಿನಲ್ಲಿ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿವಾದ ತಾರಕಕ್ಕೇರಿದ್ದು,
ಕಾಮಗಾರಿ ಸಂಬಂಧ ಪರ-ವಿರೋಧ ಹೋರಾಟಗಳು ತೀವ್ರಗೊಂಡಿವೆ. ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಕುಣಿಗಲ್ ರೈತರು, ಬರ ವೀಕ್ಷಣೆಗಾಗಿ ತೆರಳುತ್ತಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಕಾರಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡೊದಾಗಿ ಭರವಸೆ ನೀಡುವ ಮೂಲಕ ಡಿಸಿಎಂ ರೈತರ ಮನವೊಲಿಸಿದ್ದು, ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
