ಹೈಕಮಾಂಡ್ ನಾಯಕರ ಜತೆ ಯಾವುದರ ಬಗ್ಗೆ ಸಭೆ ಮಾಡಿದ್ದು? ಡಿಕೆಶಿ ಹೇಳಿದ್ದಿಷ್ಟು – Kannada News | Power Tussle In Karnataka Congress: DK Shivakumar Reacts after Meeting With High command Leaders In Delhi

ನವದೆಹಲಿ, ಫೆಬ್ರವರಿ 10) ವಿಶೇಷ ಅಧಿವೇಶನ ಮುಗಿಯುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಕುರ್ಚಿ ಕಂಪಿಸಿದೆ. ಹೌದು.. ಸದನದಲ್ಲಿ ಕದನ ಮುಗಿಯುತ್ತಿದ್ದಂತೆ ಕುರ್ಚಿ ಕದನ ತಾರಕಕ್ಕೇರಿದ್ದು, ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಹೌದು..ಡಿಸಿಎಂ ಡಿಕೆ ಡೆಲ್ಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕೆ.ಸಿ.ವೇಣುಗೋಪಾಲ್ ಭೇಟಿಗೆ ಡಿಸಿಎಂ ಡಿಕೆ ಸಮಯ ಕೇಳಿದ್ದಾರೆ. ರಾಜ್ಯ ವಿದ್ಯಮಾನಗಳ ಬಗ್ಗೆ ವಿವರವಾಗಿ ಡಿಕೆಶಿ ಮಾತುಕತೆ ನಡೆಸಲಿದ್ದಾರೆ. ಕಳೆದ ಬಾರಿಯೂ ದೆಹಲಿಗೆ ತೆರಳಿದ್ದಾಗ ವೇಣುಗೋಪಾಲ್​ರನ್ನ ಡಿಕೆ ಭೇಟಿ ಮಾಡಿದ್ರು. ಇದರ ಮಧ್ಯೆ ರಾಹುಲ್ ಗಾಂಧಿ ಭೇಟಿಗೆ ಇಬ್ಬರು ಕಾಂಗ್ರೆಸ್​ ಸಚಿವರು ಸಮಯ ಕೇಳಿದ್ರು. ಆದ್ರೆ ತಪ್ಪು ಸಂದೇಶ ರವಾನೆ ಹಿನ್ನೆಲೆ ಸಚಿವರಿಗೆ ಸಮಯವನ್ನ ರಾಹುಲ್ ಗಾಂಧಿ ನೀಡಿಲ್ಲ. ಈ ನಡುವೆ ದೆಹಲಿ ತಲುಪಿರೋ ಡಿಕೆ, ವರಿಷ್ಠರನ್ನ ಭೇಟಿಯಾಗೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಅಸ್ಸಾಂ ಚುನಾವಣಾ ಉಸ್ತುವಾರಿಯಾಗಿರೋ ಡಿಕೆಶಿ, ಇಂದು (ಫೆಬ್ರವರಿ 10) ಹೈಕಮಾಂಡ್ ನಾಯಕರ ಜೊತೆ ಎಲೆಕ್ಷನ್ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ಬಗ್ಗೆಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ, ಸಭೆ ಬಳಿಕ ಡಿಕೆಶಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *