ನವದೆಹಲಿ, ಡಿಸೆಂಬರ್ 26: ದೆಹಲಿ- ಲಕ್ನೋ ಹೆದ್ದಾರಿಯಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ಅಕೌಂಟೆಂಟ್ ಬಳಿ ಇದ್ದ 85 ಲಕ್ಷ ರೂ. ಹಣವನ್ನು ಬೈಕ್ ಸವಾರರು ದೋಚಿದ್ದಾರೆ. ಈ ಸಿನಿಮೀಯ ದರೋಡೆ (Robbery) ಹೈವೇಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಕೋರರು ಆತನ ಬಳಿ ಇದ್ದ ದುಡ್ಡಿನ ಚೀಲವನ್ನು ಕಸಿದುಕೊಂಡಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆ ಆರಂಭಿಸಲಾಗಿದೆ. ನೋಯ್ಡಾ ಮೂಲದ ಉದ್ಯಮಿಯೊಬ್ಬರಿಗೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣವನ್ನು ಸ್ಕೂಟರ್ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ಬಗ್ಗೆ ತಿಳಿದ ದರೋಡೆಕೋರರು ಆತನಿಗೆ ಅಡ್ಡಹಾಕಿ ದುಡ್ಡು ಕಸಿದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ