ನವದೆಹಲಿ, ಮಾರ್ಚ್ 4: ಫೆಬ್ರುವರಿ ತಿಂಗಳಲ್ಲಿ 24,136 ಸಂಖ್ಯೆಯಷ್ಟು ಹೊಸ ಕಂಪನಿಗಳ ರಿಜಿಸ್ಟ್ರೇಶನ್ಗಳಾಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಶೇ. 37ರಷ್ಟು ಹೆಚ್ಚು ನೊಂದಣಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಈವರೆಗಿನ 11 ತಿಂಗಳಲ್ಲೇ ಹೊಸ ಕಂಪನಿಗಳ ನೊಂದಣಿಯಲ್ಲಿ (New company registrations) ಆಗಿರುವ ಎರಡನೇ ಅತಿ ಹೆಚ್ಚಳ ಎನಿಸಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೊಸ ಬ್ಯುಸಿನೆಸ್ ನೊಂದಣಿಗಳ ಸಂಖ್ಯೆ ಕಡಿಮೆ ಆಗಿದ್ದವು. ಅಕ್ಟೋಬರ್ನಲ್ಲಿ 15,000, ಹಾಗೂ ನವೆಂಬರ್ನಲ್ಲಿ ಹತ್ತಿರಹತ್ತಿರ 14,000 ನೊಂದಣಿಗಳಾಗಿವೆ. ಜನವರಿ ತಿಂಗಳಲ್ಲಿ ಹೊಸ ಕಂಪನಿಗಳ ನೊಂದಣಿ 23,280ಕ್ಕೆ ಏರಿದರೆ, ಫೆಬ್ರುವರಿ ಅದು ಇನ್ನಷ್ಟು ಏರಿದೆ.
ಎಕೆಎಂ ಗ್ಲೋಬಲ್ ಎನ್ನುವ ಟ್ಯಾಕ್ಸ್ ಮತ್ತು ಕನ್ಸಲ್ಟಿಂಗ್ ಕಂಪನಿಯ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಅಮಿತ್ ಮಹೇಶ್ವರಿ ಅವರು ಫೆಬ್ರುವರಿಯಲ್ಲಿ ಹೊಸ ಕಂಪನಿ ರಿಜಿಸ್ಟ್ರೇಶನ್ಸ್ ಶೇ. 37ರಷ್ಟು ಹೆಚ್ಚಾಗಿರುವುದು ಬ್ಯುಸಿನೆಸ್ ವಾತಾವರಣ ಉತ್ತಮಗೊಳ್ಳುತ್ತಿರುವುದರ ಮತ್ತು ಆರ್ಥಿಕತೆಯ ಔಪಚಾರಿಕೀಕರಣ (Formalization) ಮುಂದುವರಿಯುತ್ತಿರುವುದರ ಸಂಕೇತವಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ
ನೊಂದಣಿಯಾಗುವ ಹೊಸ ಕಂಪನಿಗಳಲ್ಲಿ ಹೆಚ್ಚಿನವು ಪ್ರೈವೇಟ್ ಲಿಮಿಟೆಡ್ ಕಂಪನಿಗಳಾಗಿರುವುದು ಗಮನಾರ್ಹ. ಜನವರಿ ತಿಂಗಳಲ್ಲಿ ಶುರುವಾದ ಕಂಪನಿಗಳ ಸರಾಸರಿ ಷೇರು ಬಂಡವಾಳ (Paid up Capital) ಆರು ಲಕ್ಷ ರೂ ಎನ್ನಲಾಗಿದೆ. ಅಂದರೆ, ಸಣ್ಣ ಬ್ಯುಸಿನೆಸ್ಗಳು ಹೆಚ್ಚಾಗಿ ಶುರುವಾಗುತ್ತಿವೆ.
ಹಾಗೆಯೇ, ಹೊಸ ಕಂಪನಿಗಳು ಸರ್ವಿಸ್ ಸೆಕ್ಟರ್ನವೇ ಹೆಚ್ಚು. ಅದರಲ್ಲೂ ಐಟಿ ಸರ್ವಿಸಸ್, ಕನ್ಸಲ್ಟೆನ್ಸಿ ಮತ್ತು ಪ್ರೊಫೆಷನಲ್ ಸರ್ವಿಸಸ್ ಕಂಪನಿಗಳು ಹೆಚ್ಚಿವೆ. ಎಐ ಸಂಬಂಧಿತ ಬ್ಯುಸಿನೆಸ್ಗಳನ್ನು ಮಾಡುವ 300 ಹೊಸ ಕಂಪನಿಗಳು ಸರಾಸರಿಯಾಗಿ ಪ್ರತೀ ತಿಂಗಳು ಶುರುವಾಗುತ್ತಿವೆ ಎನ್ನಲಾಗಿದೆ.
‘ಸರ್ಕಾರದ ಸ್ಟಾರ್ಟಪ್ ಇಂಡಿಯಾ ಯೋಜನೆಯು ಹೊಸ ಬ್ಯುಸಿನೆಸ್ ಸ್ಥಾಪನೆಗೆ ಒಂದಷ್ಟು ಪುಷ್ಟಿ ಕೊಟ್ಟಿದೆ. ಡಿಪಿಐಐಟಿ ಮಾನ್ಯತೆಯ ಸ್ಟಾರ್ಟಪ್ಗಳಿಗೆ ಟ್ಯಾಕ್ಸ್ ವಿನಾಯಿತಿ ಕೊಡುವುದು, ದಿವಾಳಿತಡೆ ಕಾನೂನಿನ ಸರಳೀಕರಣ ಸೇರಿದಂತೆ ಒಂದಷ್ಟು ಉತ್ತೇಜನಕಾರಿ ಕ್ರಮಗಳು ಹೊಸ ಬ್ಯುಸಿನೆಸ್ಗಳಿಗೆ ಅನುಕೂಲ ಮಾಡಿವೆ ಎಂದು ಎಎಂಆರ್ಜಿ ಗ್ಲೋಬಲ್ ಸಂಸ್ಥೆಯ ಪಾರ್ಟ್ನರ್ ರಜತ್ ಮೋಹನ್ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
