ಹೊಸ ಕಥೆಗಾರರಿಗೆ ವೇದಿಕೆ ಕಲ್ಪಿಸಿದ ಪ್ರಿಯಾ ಸುದೀಪ್: ಕಥೆ ಹೇಳುವಂತೆ ಆಹ್ವಾನ – Kannada News | Priya Sudeep’s Supriyanvi Studio: A Platform for New Film Scriptwriters and Storytellers

ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಇತ್ತೀಚೆಗಷ್ಟೇ ತಮ್ಮ ಅಳಿಯ ಸಂಚಿತ್ ಸಂಜೀವ್ ನಟಿಸಿದ್ದ ‘ಮ್ಯಾಂಗೋ ಪಚ್ಚ’ ಚಿತ್ರವನ್ನು (Mango Pachcha Movie) ಅದ್ಧೂರಿಯಾಗಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಪ್ರಿಯಾ ಸುದೀಪ್ ಅವರು ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಮತ್ತು ಕಥೆಗಾರರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಹೊತ್ತು ತಂದಿದ್ದಾರೆ. ತಮ್ಮ ಅಧಿಕೃತ ಬ್ಯಾನರ್ ಆದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಕಥೆಗಳನ್ನು ಆಹ್ವಾನಿಸಿ ಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಅನೇಕರು ತಮ್ಮ ಬಳಿ ಕಥೆ ಇಟ್ಟುಕೊಂಡು ಸರಿಯಾದ ವೇದಿಕೆ ಸಿಗದೆ ಒದ್ದಾಡುತ್ತಾ ಇರುತ್ತಾರೆ. ಅಂಥವರಿಗೆ ಪ್ರಿಯಾ ಅವರು ವೇದಿಕೆ ಕಲ್ಪಿಸುತ್ತಿದ್ದಾರೆ. ಹೊಸ ಆಲೋಚನೆ ಹಾಗೂ ಮೌಲಿಕ ಕಥೆಗಳಿಗೆ ಮನ್ನಣೆ ನೀಡಲು ಮುಂದಾಗಿರುವ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ, ಹೊಸಬರ ಸೃಜನಶೀಲತೆಗೆ ಮುಕ್ತ ಅವಕಾಶ ನೀಡಿದೆ.

ಅಧಿಕೃತ ಪ್ರಕಟಣೆಯಲ್ಲಿ ಏನಿದೆ?

  1. ಮೌಲಿಕ ಕಥೆಗಳಿಗೆ ಆದ್ಯತೆ: ಕೇವಲ ಸಾಮಾನ್ಯ ಕಥೆಗಳಲ್ಲದೆ, ಮನಸ್ಸನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಹಾಗೂ ಬೆಳ್ಳಿಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳನ್ನು ಹುಡುಕಲಾಗುತ್ತಿದೆ.
  2. ಎಲ್ಲಾ ಮಾದರಿಯ ಕಥೆಗಳಿಗೆ ಮುಕ್ತ ಅವಕಾಶ: ನಿಮ್ಮ ಬಳಿ ಮೌಲಿಕ ಕಥೆ, ಚಿತ್ರಕಥೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ (ಕಾನ್ಸೆಪ್ಟ್) ಇದ್ದರೆ ಹಂಚಿಕೊಳ್ಳಬಹುದು. ಎಲ್ಲಾ ಪ್ರಕಾರದ ಮತ್ತು ಎಲ್ಲಾ ಮಾದರಿಯ ಕಥಾ ಸಲ್ಲಿಕೆಗಳನ್ನು ತಂಡವು ಸ್ವಾಗತಿಸುತ್ತದೆ.
  3. ವಿಶಿಷ್ಟ ದೃಷ್ಟಿಕೋನ: ವಿಶಿಷ್ಟ ದೃಷ್ಟಿಕೋನ ಹಾಗೂ ಸೃಜನಶೀಲ ಮನಸ್ಸುಳ್ಳ ಬರಹಗಾರರು ಮತ್ತು ಕಥೆಗಾರರಿಗೆ ಇದು ಸೂಕ್ತ ವೇದಿಕೆಯಾಗಲಿದೆ.
  4. ‘ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಸಂಸ್ಥೆಯು ಕಥೆಗಾರರಲ್ಲಿ ಉತ್ಸಾಹ ತುಂಬಿದೆ.
  5. ಕಥೆ ಸಲ್ಲಿಸುವುದು ಹೇಗೆ?

ನಿಮ್ಮ ಬಳಿ ಉತ್ತಮ ಕಥೆಗಳಿದ್ದರೆ, ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯು ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ನೀಡಿದೆ. 6363307434 ಇದಕ್ಕೆ ವಾಟ್ಸಾಪ್ ಮಾಡಬೇಕು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಈ ನಂಬರ್​ಗೆ ಕರೆಗಳಿಗೆ ಅವಕಾಶವಿರುವುದಿಲ್ಲ, ಕೇವಲ ವಾಟ್ಸಾಪ್ ಚಾಟ್ ಮೂಲಕ ಮಾತ್ರ ಸಂಪರ್ಕಿಸಬೇಕು.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ

‘ಮ್ಯಾಂಗೋ ಪಚ್ಚ’ ಮೂಲಕ ಈಗಾಗಲೇ ಗಮನ ಸೆಳೆದಿರುವ ಈ ನಿರ್ಮಾಣ ಸಂಸ್ಥೆ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶಿಷ್ಟ ಸಿನಿಮಾಗಳನ್ನು ಹೊತ್ತು ತರಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಈ ಪೋಸ್ಟ್ ಮೂಲಕ ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *