ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಹೋಟೆಲ್ ಉದ್ಯಮದಿಂದ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿಗಳ ಭಾರಿ ತೆರಿಗೆ ವಂಚನೆ ಬಹಿರಂಗವಾಗಿದೆ. ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಗಳಲ್ಲಿ ಈ ಬೃಹತ್ ಅಕ್ರಮ ವಹಿವಾಟು ಪತ್ತೆಯಾಗಿದೆ. ಹೋಟೆಲ್ ಮಾಲೀಕರು 2019ರಿಂದ 2026ರವರೆಗಿನ ಬಿಲ್ಲಿಂಗ್ ಡೇಟಾದಲ್ಲಿ ಗ್ರಾಹಕರಿಂದ ಪಡೆದ ಹಣದ ವಿವರಗಳನ್ನು ಅಳಿಸಿಹಾಕಿ, ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದರು. ಐಟಿ ಅಧಿಕಾರಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಫೋರೆನ್ಸಿಕ್ ತಪಾಸಣೆಯ ಮೂಲಕ ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ. ಹೈದರಾಬಾದ್‌ನ ಐಟಿ ಡಿಜಿಟಲ್ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಿಂದ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ತೆರಿಗೆ ವಂಚನೆ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, 2,000 ಕೋಟಿಗೂ ಹೆಚ್ಚು ಮೌಲ್ಯದ ಡೇಟಾ ಇಲ್ಲಿ ಡಿಲೀಟ್ ಮಾಡಲಾಗಿದೆ. ತೆಲಂಗಾಣದಲ್ಲಿ 1,500 ಕೋಟಿ ರೂ. ಮತ್ತು ತಮಿಳುನಾಡಿನಲ್ಲಿ 1,200 ಕೋಟಿ ರೂ. ಮೌಲ್ಯದ ಡೇಟಾ ಅಳಿಸಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಭಾರಿ ವಂಚನೆ ನಡೆದಿದೆ. ದೇಶದ ಒಂದು ಲಕ್ಷಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಈ ರೀತಿಯ ಬಿಲ್ಲಿಂಗ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
